Advertisement
ಇಷ್ಟೊಂದು ಸುಳ್ಳು ಏಕೆ?ಏಕೆ ಅವರು (ರಾಹುಲ್) ಈ ಪರಿಯ ಸುಳ್ಳು ಹೇಳುತ್ತಿದ್ದಾರೆ?. ಆ ನಾಯಕರಿಗೆ ಅವರ ತಂದೆ ಮಾಡಿದ ಬೊಫೋರ್ಸ್ ಪಾಪದ ಹೊರೆಯ ನೆನಪಾಗಿರ ಬೇಕು. ಹೀಗಾಗಿಯೇ ಅವರು ಮತ್ತೂಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. 15 ವರ್ಷಗಳ ಬಳಿಕ ಅವರ ಪಕ್ಷದ ನಾಯಕರಿಗೆ ರಾಜ್ಯದ ಅಧಿಕಾರ ಸಿಕ್ಕಿದೆ. ಸರಕಾರ ರಚಿಸಿ ಕೆಲವೇ ಸಮಯವಾಗಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಅವರು ಎಷ್ಟೊಂದು ಪ್ರಮಾಣದ ಹಣ ಲೂಟಿ ಹೊಡೆದಿದ್ದಾರೆ ನೋಡಿ. ಇದು ತುಘಲಕ್ ರಸ್ತೆಗೆ ನಂಟು ಇರುವ ಹಗರಣ.
ನರೇಂದ್ರ ಮೋದಿ ಪ್ರಧಾನಮಂತ್ರಿ
ಮೋದಿ ಎರಡು ಭಾರತಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಒಂದು ನೀರವ್ ಮೋದಿ ಮತ್ತು ಅನಿಲ್ ಅಂಬಾನಿ ಅವರ ಭಾರತ. ಮತ್ತೂಂದು ಬಡ ರೈತರ ಭಾರತ. ಮೋದಿ ಅವರು ಹಣವನ್ನೆಲ್ಲ ನೀರವ್ ಮೋದಿ, ಅನಿಲ್ ಅಂಬಾನಿಯಂಥವರ ಬ್ಯಾಂಕ್ ಅಕೌಂಟ್‌ಗೆ ಹಾಕುತ್ತಾರೆ. ನಾವು ಬಡವರು ಮತ್ತು ಪ್ರಾಮಾಣಿಕರ ಬ್ಯಾಂಕ್ ಅಕೌಂಟ್ ಗಳಿಗೆ 72 ಸಾವಿರ ರೂ. ಹಾಕುತ್ತೇವೆ. ಚೌಕಿದಾರ ಕಳ್ಳ ಎನ್ನುವುದು ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ. ಮಾತ್ರ ವಲ್ಲ ಭ್ರಷ್ಟಾಚಾರ ನಡೆ ದಿದೆ ಎನ್ನುವುದನ್ನು ಕೋರ್ಟ್ ಕೂಡ ಸಮ್ಮತಿಸಿದಂತಾಗಿದೆ.
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಮೋದಿ ಮತ್ತೆ ಪ್ರಧಾನಿಯಾಗಲ್ಲ
ಮೋದಿ ಮತ್ತೆ ಪ್ರಧಾನಿಯಾಗಲು ಸಾಧ್ಯವಿಲ್ಲ. 60 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿರುವ ನನಗೆ ಯಾವ ಯಾವ ರಾಜ್ಯಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದು ಗೊತ್ತಿದೆ. ಕರ್ನಾಟಕದಲ್ಲಿ ರಾಹುಲ್ ಗೆಲ್ಲಲು ದೇವೇಗೌಡ ಬಿಡಲ್ಲ. ಅವರಿಗೆ ಒಕ್ಕಲಿಗರು ಓಟು ಹಾಕುವುದಿಲ್ಲ ಎಂದು ಕೇರಳಕ್ಕೆ ಕಳುಹಿಸಿದ್ದಾರೆಂದು ತಲೆಬುಡ ವಿಲ್ಲದ ಆರೋಪವನ್ನು ಮೋದಿ ಮಾಡಿದ್ದಾರೆ. ಆದರೆ ಒಕ್ಕಲಿಗರು ಚಿಕ್ಕಮಗಳೂರು ಕ್ಷೇತ್ರದಿಂದ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಗೆಲ್ಲಿ ಸಿಲ್ಲವೇ? ಬಳ್ಳಾರಿ ಯಿಂದ ಸೋನಿಯಾ ಅವ ರನ್ನು ಜನತೆ ಆರಿಸಿಲ್ಲವೇ?
ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
Related Articles
ಮಾಧ್ಯಮಗಳು ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿಲ್ಲ. ಬಿಜೆಪಿ ಮಾಡುವ ಕಾರ್ಯಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿವೆ. ಇದರಿಂದ ಮಾಧ್ಯಮದವರ ಮೇಲೇನಾದರೂ ಹಲ್ಲೆ ನಡೆದರೆ ಅದಕ್ಕೆ ನನ್ನನ್ನು ಹೊಣೆ ಮಾಡಬೇಡಿ. ಸ್ಥಳೀಯ ಕಾರ್ಯಕರ್ತರನ್ನು ಕೆರಳಿಸುವಂತೆ ಸುದ್ದಿ ಮಾಡಬೇಡಿ. ಅವರನ್ನು ಕೆಣಕಿದರೆ ಸುಮ್ಮನಿರುವುದಿಲ್ಲ. ಇದರಿಂದ ನಿಮ್ಮ ಮೇಲೇನಾದರೂ ಹಲ್ಲೆ ನಡೆದರೆ ಸಂಪಾದಕರನ್ನು ಪ್ರೇರೇಪಿಸಿ ನನ್ನ ಮೇಲೆ ಗೂಬೆ ಕೂರಿಸಬೇಡಿ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್ ಅಭ್ಯರ್ಥಿ ಪರವಾಗಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ
Advertisement
ಎಲ್ಲಿದೆ ಉದ್ಯೋಗ?ಆಡಿದ ಮಾತನ್ನು ಉಳಿಸಿಕೊಳ್ಳುವ ಯೋಗ್ಯತೆ ಮೋದಿಗಿಲ್ಲ. ಬಡವರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂದು ಹೇಳಿ 15 ನಯಾಪೈಸೆ ಹಾಕಲಿಲ್ಲ. ಯುವಕರಿಗಾಗಿ ಕೋಟ್ಯಂತರ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ ಮೋದಿ, ಈಗ ಪಕೋಡ ಮಾರಿ ಎಂದು ಯುವಕರನ್ನು ಗೇಲಿ ಮಾಡಿದ್ದಾರೆ. ಮೋದಿ ಕೇವಲ ಸುಳ್ಳಿನ ಚೌಕಿದಾರ ಹೊರತು ಜನರ ಹಿತ ಕಾಯುವ ಕಾವಲುಗಾರರಲ್ಲ. ಬಿಜೆಪಿಗೆ ಸಾಮಾಜಿಕ ನ್ಯಾಯ, ಪ್ರಜಾತಂತ್ರ, ಸಂವಿಧಾನ ಬಗ್ಗೆ ಗೌರವವಿಲ್ಲ. ಅವರು ಮತ್ತೆ ಪ್ರಧಾನಿ ಆದರೆ ಸಂವಿಧಾನ ನಾಶವಾಗುತ್ತದೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಮೊಮ್ಮಕ್ಕಳ ಕಾಟ
ಇದುವರೆಗೂ ಅಪ್ಪ-ಮಕ್ಕಳು-ಸೊಸೆಯಂದಿರು ರಾಜಕೀಯ ಮಾಡುತ್ತಿದ್ದರು. ಈಗ ತಮ್ಮ ಮೊಮ್ಮಕ್ಕಳನ್ನು ಕಟ್ಟಿಕೊಂಡು ದೇವೇಗೌಡ ದಬ್ಟಾಳಿಕೆ ನಡೆಸುತ್ತಿದ್ದಾರೆ. ಇವರ ದೌರ್ಜನ್ಯವನ್ನು ಜಿಲ್ಲೆಯ ಜನತೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವ ಮೂಲಕ ಅಂತ್ಯ ಕಾಣಿಸಬೇಕಾಗಿದೆ. ಕಳೆದ ಹತ್ತು ತಿಂಗಳುಗಳಿಂದ ಸಮ್ಮಿಶ್ರ ಸರಕಾರ ಆಡಳಿತ ನಡೆ ಸುತ್ತಿದ್ದು ಅಭಿವೃದ್ಧಿ ಕಾಮಗಾರಿಗಳ ಕಡೆ ಗಮನ ಹರಿಸದೆ ವರ್ಗಾ ವಣೆ ದಂಧೆಯಲ್ಲಿ ತೊಡಗಿ ಲಕ್ಷಾಂ ತರ ರೂ. ಲೂಟಿ ಮಾಡುತಿದ್ದಾರೆ. ಇದುವರೆಗೂ ಯಾವ ರೈತರ ಸಾಲವನ್ನೂ ಮನ್ನಾ ಮಾಡಿಲ್ಲ.
ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ