Advertisement

ಮಳೆ ಅವಾಂತರ:ಸಂಕಷ್ಟದಲ್ಲೂ ರಾಜಕಾರಣಿಗಳ ಕೀಳು ವಾಕ್ಸಮರ 

12:06 PM Sep 27, 2017 | Team Udayavani |

ಮೈಸೂರು : ಮಂಗಳವಾರ ತಡರಾತ್ರಿಯಿಂದ ಸುರಿದ ಮಳೆಗೆ ಮೈಸೂರು ತತ್ತರಿಸಿ ಹೋಗಿದ್ದು , ಜನ ಸಂಕಷ್ಟದಲ್ಲಿ ಪರದಾಡುತ್ತಿರುವ ವೇಳೆ ರಾಜಕಾರಣಿಗಳು ಕೀಳು ವಾಕ್ಸಮರ ನಡೆಸಿದ್ದಾರೆ. 

Advertisement

ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ಕನಕಗಿರಿಯಲ್ಲಿ ಜಲಾವೃತವಾಗಿದ್ದ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಪರಿಶೀಲನೆಗೆಂದು ಕಾಂಗ್ರೆಸ್‌  ಶಾಸಕ ಎಂ.ಕೆ.ಸೋಮಶೇಖರ್‌ ಅವರು ಬೆಂಬಲಿಗರೊಂದಿಗೆ ಆಗಮಿಸಿದ್ದರು. ಇದೇ ವೇಳೆ ಬಿಜೆಪಿ ನಾಯಕ  ಎಚ್‌.ವಿ.ರಾಜೀವ್‌ ಅವರೂ  ಸ್ಥಳಕ್ಕಾಗಮಿಸಿದ್ದಾರೆ.

ಹಾವು ಮುಂಗುಸಿಯಂತೆ ಜಗಳಕ್ಕಿಳಿದ ಇಬ್ಬರು ಪರಸ್ಪರ ವಾಕ್ಸಮರ ನಡೆಸಿದರು. ‘ಅವಾಂತರಕ್ಕೆ ಶಾಸಕರ ನಿರ್ಲಕ್ಷ್ಯ’ ಎಂದು ರಾಜೀವ್‌ ಆರೋಪಿಸಿದರೆ. ‘ಬಿಜೆಪಿಯ ಶಾಸಕರು, ಸಚಿವರು 15 ವರ್ಷ ಕ್ಷೇತ್ರದಲ್ಲಿದ್ದರಲ್ಲ, ಅವರೇನು ಮಾಡಿದ್ದಾರೆ’ ಎಂದು ಸೋಮಶೇಖರ್‌ ಪ್ರಶ್ನಿಸಿದರು. ಇಬ್ಬರೂ ಪರಸ್ಪರ ಕೀಳು ಶಬ್ಧಗಳನ್ನು ಬಳಸಿ ಬೀದಿ ಜಗಳ ಮಾಡಿರುವುದು ಪರದಾಡುತ್ತಿದ್ದ ಜನರ ಆಕ್ರೋಶಕ್ಕೆ ಕಾರಣವಾಯಿತು. 

ರಾಜೀವ್‌ ಅವರು ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next