Advertisement

ರಾಜಕೀಯ ಹಿಂಸೆಗೆ ಸಂವಿಧಾನದಲ್ಲಿ ಸ್ಥಾನವಿಲ್ಲ: ರಾಷ್ಟ್ರಪತಿ ಕೋವಿಂದ್‌

06:00 AM Aug 07, 2018 | |

ತಿರುವನಂತಪುರ/ಕಾಸರಗೋಡು: ಕೇರಳದಲ್ಲಿ ಸಿಪಿಎಂ- ಆರ್‌ಎಸ್‌ಎಸ್‌ ಕಾರ್ಯಕರ್ತರ ನಡುವಿನ ರಾಜಕೀಯ ಹತ್ಯಾ ಘಟನೆಗಳು ನಡೆಯುತ್ತಿರುವಂತೆಯೇ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಕೇರಳ ಪ್ರವಾಸ ಆರಂಭಿಸಿದ್ದಾರೆ. ತಿರುವನಂತಪುರದಲ್ಲಿರುವ ಕೇರಳ ವಿಧಾನಸಭೆಯ ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್‌, ಸಂವಿಧಾನದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಪರಸ್ಪರರ ವಾದ, ಅಭಿಪ್ರಾಯ ಗೌರವಿಸುವ ಅಂಶ ಕೇರಳಿ ಗರಲ್ಲಿ ಹೆಚ್ಚಾಗಿಯೇ ಇದೆ. ಇದರ ಹೊರತಾಗಿಯೂ ಕೇರಳ ದಲ್ಲಿ ರಾಜಕೀಯ ಹಿಂಸೆಗಳು ನಡೆಯುತ್ತಿವೆ. ರಾಜಕೀಯ ಹಿಂಸೆಗೆ ಸಂವಿಧಾನದಲ್ಲಿ ಸ್ಥಾನವಿಲ್ಲ’ ಎಂದು ಹೇಳಿದ್ದಾರೆ.

Advertisement

ಅರ್ಚಕನ ಬಂಧನ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭಾಗವಹಿಸಲಿರುವ ಸೈಂಟ್‌ ಥಾಮಸ್‌ ಕಾಲೇಜಿಗೆ ಬಾಂಬ್‌ ಹಾಕುವುದಾಗಿ ಬೆದರಿಕೆ ಹಾಕಿದ ಅರ್ಚಕನನ್ನು ಬಂಧಿಸ ಲಾಗಿದೆ. ಮದ್ಯದ ಅಮಲಿನಲ್ಲಿ ಭಾನುವಾರ ರಾತ್ರಿ 1 ಗಂಟೆಗೆ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಚೆರಿಕಲ್‌ ಭಗವತಿ ದೇಗುಲದ ಅರ್ಚಕ ಜಯರಾಮನ್‌ ಫೋನ್‌ ಮಾಡಿ ಬೆದರಿಕೆ ಹಾಕಿದ್ದು, ಅವರ ವಿರುದ್ಧ ಕೇಸು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next