Advertisement

ಮೈತ್ರಿ ಸರ್ಕಾರ ಪತನವಾಗದಿದ್ದರೆ ರಾಜಕೀಯ ನಿವೃತ್ತಿ : ರೇಣುಕಾಚಾರ್ಯ

09:24 AM Jun 03, 2019 | Vishnu Das |

ದಾವಣಗೆರೆ: ಬೆಟ್ಟಿಂಗ್‌ ಕಟ್ಟುತ್ತೇನೆ, ತಾಕತ್‌ ಇದ್ದರೆ ಬನ್ನಿ. ನೂರಕ್ಕೆ ನೂರು ಮೈತ್ರಿ ಸರ್ಕಾರ ಪತನವಾಗುತ್ತದೆ. ಆಗದೇ ಹೋದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿ ಶಾಸಕಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದು ಅವರು ರಾಜ್ಯದಲ್ಲಿರುವುದು ಕುಮಾರಸ್ವಾಮಿ, ರೇವಣ್ಣ, ಡಿ.ಕೆ.ಶಿವಕುಮಾರ್‌ ಮತ್ತು ಪರಮೇಶ್ವರ್‌ ನಡೆಸುತ್ತಿರುವ ನಾಲ್ಕು ಜನರ ಸರ್ಕಾರ. ಕಾಂಗ್ರೆಸ್‌ನ ಪ್ರಬಲ ಗುಂಪು ಸರ್ಕಾರ ಪತನಕ್ಕೆ ಸ್ಕೆಚ್‌ ಹಾಕಿದೆಎಂದರು.

ನಾವು ಆಪರೇಷನ್‌ ಕಮಲ ಮಾಡಲ್ಲ,ಮಾಡಲ್ಲ,ಮಾಡಲ್ಲ. ಬಿಜೆಪಿ ಸರ್ಕಾರ ಬರುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ, ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನಾಗಿ ಕೂರುತ್ತಾರೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್‌ನವರು ಚುನಾವಣೆಗುಮ್ಮ ಬಿಟ್ಟು ಸರ್ಕಾರದಲ್ಲಿನ ಗೊಂದಲಗಳನ್ನ ದೂರ ಮಾಡಲು ನೋಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next