Advertisement

ರಾಜಕೀಯ ಗುರು, ಶಿಷ್ಯರ ಜಂಟಿ ಪ್ರಚಾರ

06:00 AM Oct 30, 2018 | |

ಕೂಡ್ಲಿಗಿ: ಉಪಚುನಾವಣೆ ಘೋಷಣೆಯಾದ ನಂತರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮೈತ್ರಿ ಪಕ್ಷಗಳ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಪ್ರಚಾರ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿಯಲ್ಲಿ ಸೋಮವಾರ ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರ ಬಹಿರಂಗ ಸಭೆ ಆಯೋಜಿಸ ಲಾಗಿತ್ತು. ಬಹಳ ವರ್ಷಗಳ ನಂತರ ರಾಜಕೀಯದ ಗುರು- ಶಿಷ್ಯರು ಇಂತಹ ಬಹಿರಂಗ ಸಭೆ
ಯಲ್ಲಿ ಒಟ್ಟೊಟ್ಟಿಗೆ ಪಾಲ್ಗೊಂಡು ಜನರ ಅಚ್ಚರಿಗೆ ಕಾರಣರಾದರು. 

Advertisement

ಇಬ್ಬರೂ ಸೇರಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದರು. ಅಲ್ಲದೆ ಉತ್ತಮ ಆಡಳಿತಕ್ಕೆ ಮೈತ್ರಿ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸಿ ಎಂದರು. ಸಭೆಯಲ್ಲಿ ಮಾತನಾಡಿದ ದೇವೇಗೌಡ “ರಾಜಕೀಯವಾಗಿ ಸಿದ್ದರಾಮಯ್ಯ ಹಾಗೂ ದೇವೇಗೌಡರು ಮೊದಲು ಹೊಡೆದಾಡಿದ್ದರೂ ಈಗೇನು ಒಂದೇ ವೇದಿಕೆಯಲ್ಲಿ ಸೇರಿಕೊಂಡಿದ್ದಾರೆ ಎಂದು ತಪ್ಪು ಭಾವಿಸಬೇಡಿ. ನನಗೆ ಪ್ರತಿಷ್ಠೆ ಇಲ್ಲ, ಈ ದೇಶದ ಭವಿಷ್ಯದ ದೃಷ್ಟಿಯಿಂದ ಜೊತೆಯಾಗಿದ್ದೇವೆ’ ಎಂದರು. ಈ ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆದ್ದರೆ ಹಿಂದೂಸ್ತಾನದ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ. ಈ ಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಕೇಂದ್ರದಲ್ಲಿಯೂ ಮುಂದೆ ಮೈತ್ರಿ ಸರ್ಕಾರವೇ ಆಡಳಿತ ನಡೆಸೋದು ಶತಸಿದಟಛಿ ಎಂದರು. ಸಿದ್ದರಾಮಯ್ಯ ಸರ್ಕಾರ 5 ವರ್ಷ ಜನಪರ ಕಾರ್ಯಕ್ರಮ ನೀಡಿದೆ. ಇದನ್ನು ಜನತೆ ಮರೆತಿಲ್ಲ. ಹೀಗಾಗಿ ಈ ಉಪಚುನಾವಣೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಯೋಜನೆ ಹಾಗೂ ಸಾಧನೆಗಳನ್ನೇ ಮುಂದಿಟ್ಟು ಪ್ರಚಾರ ನಡೆಸಲಾಗುತ್ತಿದೆ. ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ ಎಂದರು. ವಿಧಾನಸಭೆ ಮುಂಭಾಗದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಿಸಲು ಸಿದ್ದರಾಮಯ್ಯ ಸರ್ಕಾರದಲ್ಲಿ ಉಗ್ರಪ್ಪ ಮಹತ್ವದ ಪಾತ್ರ ವಹಿಸಿದ್ದಾರೆ. ಉಗ್ರಪ್ಪ ಉತ್ತಮ  ರಾಟಗಾರರಾಗಿದ್ದು, ಇಂತಹವರನ್ನು ಗೆಲ್ಲಿ ಸುವ ಮೂಲಕ ಮೈತ್ರಿ ಸರ್ಕಾರಕ್ಕೆ ಮತ್ತಷ್ಟು ಬಲ ತುಂಬಬೇಕು ಎಂದು ಕರೆ ನೀಡಿದರು.

ಗೌರವ ಕೊಡುವುದು ನನ್ನ ಧರ್ಮ ದೇವೇಗೌಡರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ “ಅಜಾನ್‌’ ಕೂಗಿದಾಗ ದೇವೇಗೌಡರು ಭಾಷಣ ನಿಲ್ಲಿಸಿ 3 ನಿಮಿಷ ಮೌನಕ್ಕೆ ಶರಣಾದರು. ನಂತರ ಮಾತು ಪ್ರಾರಂಭಿಸಿ ಯಾವುದೇ ಧರ್ಮದ ಪ್ರಾರ್ಥನೆ ನಡೆದರೂ ಅದಕ್ಕೆ ಗೌರವ ಕೊಡುವುದು ನನ್ನ ಧರ್ಮ ಎಂದು ತಮ್ಮ ಜಾತ್ಯತೀತ ನಿಲುವು ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next