Advertisement

ಮಂಡ್ಯದಿಂದ ಮಾತ್ರ ರಾಜಕೀಯ ಪ್ರವೇಶ

01:40 AM Feb 02, 2019 | |

ಬೆಂಗಳೂರು: ಮಂಡ್ಯದಿಂದ ಆಗಮಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಸುಮಲತಾ ಅಂಬರೀಶ್‌ ಅವರನ್ನು ಶುಕ್ರವಾರ ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಮನವಿ ಮಾಡಿದರು.

Advertisement

ಜಯನಗರದ ನಿವಾಸದಲ್ಲಿ ಭೇಟಿ ಮಾಡಿದ ಕಾರ್ಯಕರ್ತರು, ಮಂಡ್ಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಬೇಕು. ಪಕ್ಷೇತ ರರಾಗಿ ಸ್ಪರ್ಧಿಸಿದರೂ ನಾವು ಬೆಂಬಲ ನೀಡುತ್ತೇವೆ. ದೇವೇಗೌಡರು ಅಂಬರೀಶ್‌ ಅವರನ್ನು ತಮ್ಮ ಮಗ ಎಂದು ಹೇಳಿದ್ದರು. ನೀವು ಸ್ಪರ್ಧೆ ಮಾಡಿದರೆ ಎಲ್ಲರೂ ಬೆಂಬಲಿಸುತ್ತಾರೆ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ‘ರಾಜಕೀಯ ಪ್ರವೇಶಿಸಿದರೆೆ, ಮಂಡ್ಯ ದಿಂದಲೇ ಕಣಕ್ಕಿಳಿಯುವೆ. ಮಂಡ್ಯದ ಅಭಿ ಮಾನಿಗಳ ಪ್ರೀತಿ ಕಳೆದುಕೊಳ್ಳಲು ನಾನು ಮತ್ತು ನನ್ನ ಮಗ ಇಬ್ಬರೂ ಇಷ್ಟ ಪಡುವು ದಿಲ್ಲ. ನಾನು ಯಾರಿಗೂ ಸವಾಲು ಹಾಕು ವುದಿಲ್ಲ. ಯಾರ ವಿರುದ್ಧವೂ ಹೋಗು ವುದಿಲ್ಲ. ನನಗೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ಅಕಸ್ಮಾತ್‌ ರಾಜಕೀಯಕ್ಕೆ ಬಂದರೆ ಮಂಡ್ಯದಿಂದ ಮಾತ್ರ. ಮಂಡ್ಯದ ಜನರೊಂದಿಗೆ ಅಂಬರೀಶ್‌ಗೆ ಇದ್ದ ಸಂಬಂಧವನ್ನು ಕಡಿದುಕೊಳ್ಳಲು ಸಾಧ್ಯವಿಲ್ಲ. ಅಭಿಮಾನಿಗಳೇ ನನ್ನ ಶಕ್ತಿ. ನನಗೆ ಯಾವುದೇ ಪದವಿ ಅಥವಾ ರಾಜಕೀಯದ ಆಸೆ ಇಲ್ಲ. ಯಾವುದೇ ದುಡುಕಿನ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ರಾಜಕೀಯದಲ್ಲಿ ಚುನಾವಣೆ ಎದುರಿಸುವುದು ಅಷ್ಟು ಸುಲಭವಲ್ಲ. ಎಲ್ಲವನ್ನೂ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದರು.

ಅಂಬರೀಶ್‌ ಅವರು ಕಾಂಗ್ರೆಸ್‌ ಪಕ್ಷದಿಂ ದಲೇ ಗುರುತಿಸಿಕೊಂಡಿದ್ದರು. ನಮಗೂ ಕೂಡ ಕಾಂಗ್ರೆಸ್‌ ಪಕ್ಷ ಪರಿಚಯ. ಆದರೆ, ನಾನು ಯಾವುದೇ ಕಾಂಗ್ರೆಸ್‌ ನಾಯಕರ ಜೊತೆ ಮಾತನಾಡಿಲ್ಲ. ಕಾಂಗ್ರೆಸ್‌ ನಾಯಕರ ಜೊತೆ ಮಾತನಾಡಬೇಕು. ನಾನು ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ಅಭಿಮಾನಿಗಳ ಪ್ರೀತಿಗೆ ಖಂಡಿತ ಬೆಲೆ ಕೊಡುತ್ತೇವೆ. ಅವರ ಪ್ರೀತಿ ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ತಿಳಿಸಿದರು.

ಅಂಬಿ ಅಭಿಮಾನಿ ಮಗುವಿಗೆ ನಾಮಕರಣ

Advertisement

ಅಂಬರೀಶ್‌ ಅವರ ಅಭಿಮಾನಿ, ಮಂಡ್ಯದ ಪುಟ್ಟಸ್ವಾಮಿ ಹಾಗೂ ಪಲ್ಲವಿ ಅವರ 2 ವರ್ಷದ ಗಂಡು ಮಗುವಿಗೆ ಸುಮಲತಾ ನಾಮಕರಣ ಮಾಡಿದರು. ಮಗುವಿಗೆ ಅಂಬರೀಶ್‌ ಎಂದೇ ನಾಮಕರಣ ಮಾಡಿದರು. ಅಂಬರೀಶ್‌ ಬದುಕಿದ್ದಾಗ ಮಗುವಿಗೆ ನಾಮಕರಣ ಮಾಡುವ ಭರವಸೆ ನೀಡಿದ್ದರು. ಅವರು ಅಕಾಲಿಕ ನಿಧನ ಹೊಂದಿದ್ದರಿಂದ ಪುಟ್ಟಸ್ವಾಮಿ ದಂಪತಿ ಈಗ ಸುಮಲತಾ ಅವರಿಂದ ನಾಮಕರಣ ಮಾಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next