Advertisement

“ತುಘಲಕ್‌’ಎಂಬ ರಾಜಕೀಯ ನಾಟಕ

02:40 PM Apr 07, 2018 | Team Udayavani |

ಕಾರ್ನಾಡರ “ತುಘಲಕ್‌’ ಭಾರತದ ಅತ್ಯುತ್ತಮ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಓಡಲೊಳಗಿರಿಸಿಕೊಂಡಿದೆ. ಈ ನಾಟಕದ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳಲ್ಲಿ ಮಾಡಲಾಗಿದೆ. ಈ ನಾಟಕ ನಗರದಲ್ಲಿ ಪ್ರದರ್ಶನ ಕಾಣುತ್ತಿದೆ. ಸಮುದಾಯ ತಂಡ ಪ್ರಸ್ತುತ ಪಡಿಸುತ್ತಿರುವ ಆ ನಾಟಕ ಅಪಾರ ಜನಮನ್ನಣೆ ಮತ್ತು ಅಭಿಮಾನಿಗಳನ್ನು ಸಂಪಾದಿಸಿದೆ. ಸಂಗೀತ, ಅಭಿನಯ, ಬೆಳಕು ಹೀಗೆ ಎಲ್ಲಾ ವಿಭಾಗಗಳಲ್ಲೂ ನಾಟಕ ವೀಕ್ಷಕರ ಗಮನ ಸೆಳೆಯುತ್ತದೆ.

Advertisement

ಇನ್ನು ನಾಟಕದ ಕುರಿತು ಹೇಳುವುದಾದರೆ ತುಘಲಕ್‌ನ ಅವನತಿಯ ಕಥಾವಸ್ತು ನಾಟಕದ ಪ್ರಮುಖ ಅಂಶ. ತನ್ನ ರಾಜ್ಯದ ಕುರಿತು ಉಜ್ವಲ ಭವಿಷ್ಯದ ಕನಸು ಕಂಡವ ಅಂತಿಮ ದಿನಗಳಲ್ಲಿ ಎಂಥೆಂಥ ಸವಾಲುಗಳನ್ನು ಎದುರಿಸುತ್ತಾನೆ ಎನ್ನುವುದನ್ನು ನಾಟಕ ಹಿಡಿದಿಟ್ಟಿದೆ. ಆತನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಡಿದೆ. ಆ ಮೂಲಕ ರಾಜಕಾರಣದ ಒಳಸುಳಿಗಳನ್ನು ನಾಟಕ ಪ್ರೇಕ್ಷಕರ ಮುಂದೆ ಬಿಚ್ಚಿಡುತ್ತದೆ. ಮೇಲ್ನೋಟಕ್ಕೆ ತುಘಲಕ್‌ ಐತಿಹಾಸಿಕ ನಾಟಕವೆನಿಸಿದರೂ ಇಂದಿನ ಕಾಲಕ್ಕೂ ಪ್ರಸ್ತುತತೆಯನ್ನು ಪಡೆಯುತ್ತದೆ.  ಡಾ. ಸ್ಯಾಂ ಕುಟ್ಟಿ ಪಟ್ಟೋಮ್‌ಕರಿ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಎಲ್ಲಿ?: ರಂಗಶಂಕರ, ಜೆ.ಪಿ. ನಗರ

ಯಾವಾಗ?: ಏಪ್ರಿಲ್‌ 8, ಸಂಜೆ 3.30 ಮತ್ತು 7.30 

Advertisement

Udayavani is now on Telegram. Click here to join our channel and stay updated with the latest news.

Next