Advertisement
ನಗರದ ಪ್ರಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಕರ್ತ ಎಸ್.ಲಕ್ಷ್ಮೀ ನಾರಾಯಣ ಅವರ “ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್” ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿನ ರಾಜಕೀಯವು ಸಾರ್ವಜನಿಕರ ಜೀವನದಲ್ಲೂ ದೊಡ್ಡ ಪ್ರಭಾವ ಬೀರುತ್ತದೆ.
Related Articles
Advertisement
ಆದರೆ, ಅಂತಹ ರಾಜಕೀಯದ ಆಫ್ ದಿ ರೆಕಾರ್ಡ್‌ಗಳನ್ನು (ಆಂತರಿಕ ಅಂಶ) ಪತ್ರಕರ್ತ ಲಕ್ಷ್ಮೀನಾರಾಯಣ ಅವರು ತಮ್ಮ ಅಂಕಣದಲ್ಲಿ “ಅಮಾಸೆ ಹಾಗೂ ಚೇರ್ಮನ್ರು” ಪಾತ್ರದ ಮೂಲಕ ವಿಡಂಬನಾತ್ಮಕವಾಗಿ ಜನರಿಗೆ ಮುಟ್ಟಿಸುತ್ತಿದ್ದಾರೆ. ಮುಖ್ಯವಾಗಿ ಈ ಪುಸ್ತಕದಲ್ಲಿ ಅಂತಹ ಆಯ್ದ ಅಂಕಣಗಳಿವೆ. ಇನ್ನು ಇಲ್ಲಿನ ಬಹುತೇಕ ಬರಹವು ಹಳ್ಳಿ ಸೊಗಡಿನಲ್ಲಿಯೇ ಇದ್ದು ಈ ಮೂಲಕ ಕೃತಿಯು ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಆಫ್ ದಿ ರೆಕಾರ್ಡ್ ಪದಕ್ಕೆ 25 ವರ್ಷಗಳ ಹಿಂದೆ ಮಹತ್ವ ಇತ್ತು. ಆದರೆ, ಇಂದು ರಾಜಕಾರಣಿಗಳ ಮಾತುಗಳು ಆಫ್ ದಿ ರೆಕಾರ್ಡ್ ಆಗಿ ಉಳಿದಿಲ್ಲ. ಇದರಿಂದಾಗಿ ಎಷ್ಟೋ ರಾಜಕಾರಣಿಗಳು ಖ್ಯಾತಿ ಕುಖ್ಯಾತಿಗಳನ್ನು ಪಡೆದಿದ್ದಾರೆ. ಆದರೆ, ಕೆಲ ಪತ್ರಕರ್ತರು ಇಂದಿಗೂ ಆಫ್ ದಿ ರೆಕಾರ್ಡ್ ಪಾಲಿಸಿ ಮುಂದುವರೆಸಿಕೊಂಡು ಬಂದಿದ್ದಾರೆ.
ಅಂತವರ ಸಾಲಿಗೆ ಲಕ್ಷ್ಮೀನಾರಾಯಣ ಅವರ ಸೇರಿದ್ದು, ಅವರು ಪ್ರಸ್ತುತ ರಾಜಕೀಯದ ವಸ್ತು ಸ್ಥಿತಿಯನ್ನು ಮತ್ತು ಅದರಲ್ಲಿನ ಆಂತರಿಕ ಅಂಶಗಳನ್ನು ಅಂಕಣ ರೂಪದಲ್ಲಿ ಬರೆದಿದ್ದಾರೆ. ಆ ಅಂಕಣ ಬರಹಗಳನ್ನು ಒಟ್ಟಾಗಿ ಸೇರಿಸಿರುವ ಈ “ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್’ ಪುಸ್ತಕ ಸಂಗ್ರಹಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಪ್ರಸ್‌ಕ್ಲಬ್ ಅಧ್ಯಕ್ಷ ಕೆ.ಸದಾಶಿವ ಶಣೈ, ಅನು ಪ್ರಕಾಶನದ ಬಿ.ಎನ್.ರಮೇಶ್, ಪತ್ರಕರ್ತ ಎಸ್.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು. ಪತ್ರಕರ್ತ ವೈ.ಗ.ಜಗದೀಶ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಅಧರ್ಮ ರಾಜಕಾರಣ ಕುರಿತು ಎಚ್.ವಿಶ್ವನಾಥ್ ಪುಸ್ತಕ: ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಪುಸ್ತಕ ಕುರಿತು ಮಾತನಾಡಿದ ವಿಶ್ವನಾಥ್ ಅವರು, ರಾಜಕೀಯದಲ್ಲಿ ನಾನು ಕಂಡ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುತ್ತಿದ್ದೇನೆ.
ಅದರ ಸಾಲಿಗೆ ಮತ್ತೂಂದು ಕೃತಿ ಸೇರ್ಪಡೆಯಾಗುತ್ತಿದ್ದು, ಚುನಾವಣೆ ಬಳಿಕ ಪ್ರಕಟಿಸಲಾಗುವುದು. ಪುಸ್ತಕದ ಹೆಸರು “ಕರ್ನಾಟಕದಲ್ಲಿ ಮುಂದುವರೆದ ಅಧರ್ಮ ರಾಜಕಾರಣ 2006 ಮತ್ತು 18” ಆಗಿದ್ದು, ಮನಸ್ಸಿನಲ್ಲಿಯೇ ಉಳಿದುಕೊಂಡಿರುವ ಕೆಲವೊಂದು ವಿಚಾರಗಳನ್ನು ಈ ಕೃತಿಯಲ್ಲಿ ಬಹಿರಂಗ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.