Advertisement
ಮನೆಗೆ ಎಂಥ ನೋಟ ನೀಡಬೇಕು ಎಂಬುದು ಸಾಮಾನ್ಯವಾಗಿ ಫಿನಿಶಿಂಗ್ ವೇಳೆಯಲ್ಲಿ ಕಾಡುವ ಪ್ರಶ್ನೆ. ಒಂದು ಕಡೆ ದೇಸೀ ನೋಟ ನೀಡಿದರೆ ಹೇಗೆ? ಎಂಬ ಉತ್ಸಾಹ ಇದ್ದರೆ, ಮತ್ತೂಂದೆಡೆ ಎಲ್ಲವೂ ಮಿರಮಿರನೆ ಮಿಂಚಬಾರದೇಕೆ? ಎಂಬ ಆಸೆಯೂ ಹುಟ್ಟಬಹುದು. ಕೆಲವೊಮ್ಮೆ ಇಡೀ ಮನೆಯನ್ನು ಕಲ್ಲಿನಿಂದಲೇ ನಿರ್ಮಿಸಬೇಕೆಂಬ ಆಸೆ ಹುಟ್ಟಿದರೆ, ಮಿಕ್ಕ ವೇಳೆ ಮಾಮೂಲಿ “ಪ್ಲಾಸ್ಟರ್ ಪೇಂಟ್’ ಫಿನಿಶ್ ಸಾಕಪ್ಪಾ ಎಂದು ನಿರ್ಧರಿಸುವುದೂ ಇದ್ದದ್ದೇ. ಪ್ರತಿ ಫಿನಿಶ್‌ನಲ್ಲೂ ಅದರದೇ ಆದ ವಿಶೇಷತೆ ಇದ್ದು, ನಮಗೆ ಸೂಕ್ತವಾದುದ್ದನ್ನು ಆಯ್ದುಕೊಂಡರೆ, ನಮಗಿಷ್ಟವಾದ ಮನೆ ನಮ್ಮದಾಗುತ್ತದೆ. ಕಟ್ಟಡ ಮುಗಿಸುವ ವೇಳೆ ನಾವು ಆಯ್ದುಕೊಳ್ಳುವ ಫಿನಿಶ್ ಬಜೆಟ್ ಮೇಲೆ ಪರಿಣಾಮ ಬೀರುವ ಕಾರಣ, ವಿವಿಧ ಲುಕ್‌ಗಳ ರೇಟ್ ಬಗ್ಗೆ ತಿಳಿದುಕೊಂಡು ಮುಂದುವರಿಯುವುದು ಉತ್ತಮ.
ಬಹುತೇಕ ವಸ್ತುಗಳನ್ನು ನುಣುಪಾಗಿಸಿ, ತೀಡಿ ತೀಡಿ ಫಿನಿಶ್ ನೀಡಿದರೆ ಉತ್ತಮ ಪಾಲಿಶ್ ಪಡೆದುಕೊಂಡು ಮಿರಮಿರನೆ ಮಿಂಚುತ್ತವೆ. ಇದು ಗಟ್ಟಿಮುಟ್ಟಾದ ವಸ್ತುಗಳಿಗೆ ಅನ್ವಯವಾಗುವುದಾದರೂ ಮರದಂಥ ಮೆದು ವಸ್ತುಗಳಿಗೆ ಹೆಚ್ಚುವರಿಯಾಗಿ ಪಾಲಿಷ್ ಬಳಿದು ಅದರಲ್ಲಿರುವ ನೈಸರ್ಗಿಕ ರೇಖೆಗಳನ್ನು ಮೆರೆಯುವಂತೆ ಮಾಡಲಾಗುತ್ತದೆ. ಮರಕ್ಕೆ ವೈವಿಧ್ಯ ಲುಕ್ಕು
ದುಬಾರಿ ಮರಗಳಿಗೆ ಸಾಮಾನ್ಯವಾಗಿ ಮಾಡುವ ಪಾಲಿಷ್ “ಫ್ರೆಂಚ್ ಪಾಲಿಷ್’ ಆಗಿದ್ದು, ಇದು ಅತಿ ಶ್ರಮ ಹಾಗೂ ವೇಳೆ ಬೇಡುವುದರಿಂದ, ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಕಡಿಮೆ ಆಗಿದ್ದು, ಟಚ್ ವುಡ್ ಮಾದರಿಯ ಪಾಲಿಯೂರಿತೇನ್ ಬಳಿಯುವ ಇಲ್ಲವೆ ಸ್ಪ್ರೆà ಸಿಂಪಡಿಸಬಹುದಾದ ಪಾಲಿಷ್‌ಗಳು ಜನಪ್ರಿಯವಾಗಿದೆ. ಪಾಲಿಷ್ ಯಾವುದೇ ಇರಲಿ, ಮರವನ್ನು ಮೊದಲು ತಯಾರಿ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಬಾಗಿಲು, ಚೌಕಟ್ಟು, ಕಿಟಕಿ ಇತ್ಯಾದಿಗಳ ಬಡಗಿ ಕಾರ್ಯ ಮುಗಿದ ಮೇಲೆ, ಮರಳು ಕಾಗದ- ಸ್ಯಾಂಡ್ ಪೇಪರ್ ಉಪಯೋಗಿಸಿ ನುಣುಪಾಗುವವರೆಗೆ ಉಜ್ಜಬೇಕು. ನಂತರ ಅದರಲ್ಲಿರಬಹುದಾದ ನ್ಯೂನತೆಗಳನ್ನು ಮೂಲ ಮರದಲ್ಲಿರುವಂತೆಯೇ ಮ್ಯಾಚ್ ಮಾಡಿ ತುಂಬಬೇಕು. ಇದಕ್ಕೆ ವಿವಿಧ ಬಗೆಯ ಬಣ್ಣದ ಪುಡಿಗಳು ಲಭ್ಯ.
Related Articles
ಕೆಲವರಿಗೆ ಮಿರಮಿರನೆ ಮಿಂಚುವ ಪಾಲಿಷ್ ಇಷ್ಟವಾಗುವುದಿಲ್ಲ. ಅಂಥವರಿಗೆ “ಮ್ಯಾಟ್ ಫಿನಿಶ್’ ಅಂದರೆ ಸ್ವಲ್ಪ ತರಿತರಿಯಾಗಿರುವ ನೋಟ ಕೊಡಬಹುದು. ಪಾಲಿಯೂರಿತೇನ್ ಪಾಲಿಷ್‌ಗಳಲ್ಲಿ ಇದಕ್ಕೆಂದೇ ಪ್ರತ್ಯೇಕವಾಗಿ ತಯಾರಾದ ದ್ರವ್ಯಗಳು ಲಭ್ಯ. ಇವನ್ನು ಬಳಿದರೆ, ಅದು ಒಣಗಿದ ಮೇಲೆ ಮ್ಯಾಟ್ ಫಿನಿಶ್ ಪಡೆದುಕೊಳ್ಳುತ್ತವೆ. ನಿಮಗೆ ಮಿರಮಿರನೆ ಮಿರುಗುವ, ಕನ್ನಡಿಯಂತೆ ಹೊಳೆಯುವ ಫಿನಿಶ್ ಬೇಕೋ, ಇಲ್ಲಾ ಕಣ್ಣಿಗೆ ರಾಚದಂತಿರುವ, “ಸೋಬರ್’- ನೋಟ ಬೇಕೋ ಎಂಬುದು ಮನೆಯ ಇತರೆ ಫಿನಿಶ್‌ಗಳನ್ನು ಆಧರಿಸಿ ನಿರ್ಧರಿಸಬಹುದು. ಇಡೀ ಮನೆ ಮಿರಮಿರನೆ ಮಿಂಚುವುದು ಕೆಲವರಿಗೆ ಇಷ್ಟವಾಗದಿದ್ದರೆ, ಕೆಲವೊಂದು ಭಾಗವನ್ನು ಮಿರರ್ ಫಿನಿಶ್ ಮಾಡಿಕೊಂಡು, ಮಿಕ್ಕ ಭಾಗವನ್ನು ಮ್ಯಾಟ್ ಫಿನಿಶ್ ಮಾಡಿಕೊಳ್ಳಬಹುದು.
Advertisement
ಪಾಲಿಷ್ ಯಾವ ರೀತಿಯಲ್ಲಿದ್ದರೆ ಉತ್ತಮ ಎಂದು ನಿರ್ಧರಿಸಲು ಇರುವ ಮತ್ತೂಂದು ಮಾನದಂಡ- ಏರಿಯ ಹೆಚ್ಚಿದ್ದರೆ, ಮ್ಯಾಟ್ ಫಿನಿಶ್ ಇದ್ದಾಗ ಚೆನ್ನಾಗಿರುತ್ತದೆ. ಕಡಿಮೆ ಪ್ರದೇಶ ಇದ್ದರೆ, ಕನ್ನಡಿ ಪಾಲೀಶ್ ಮಾಡಿಸಿಕೊಳ್ಳಬಹುದು.
ಮೇಣದ ಪಾಲಿಷ್ಹೆಚ್ಚು ಧೂಳು ಇರದ ಸ್ಥಳಗಳಲ್ಲಿ ಹಾಗೂ ಸ್ವಲ್ಪ ಮೆಂಟೇನೆನ್ಸ್ ಬಂದರೂ ಪರವಾಗಿಲ್ಲ ಎಂಬ ಮನೋಭಾವ ಇರುವ ಮಂದಿಗೆ ಹೆಚ್ಚು ನೈಸರ್ಗಿಕ ಹಾಗೂ ಅಷ್ಟೇನೂ ದುಬಾರಿ ಅಲ್ಲದ ಮೇಣದ ಫಿನಿಶ್‌ಗೆ ಮೊರೆ ಹೋಗಬಹುದು. ಈ ಪಾಲಿಷ್‌ನ ವಿಧಾನದಲ್ಲಿ, ಮೇಣ ಆಧರಿಸಿ ತಯಾರಿಸಿದ “ಮ್ಯಾನ್‌ಷನ್’ ಮಾದರಿಯ ಮೆರುಗನ್ನು ನೀಡಬಹುದು. ಇಲ್ಲಿ ಎಲ್ಲವೂ ಮಾಮೂಲಿ ಪಾಲಿಷ್ ಪ್ರಕ್ರಿಯೆಯಂತೆಯೇ ಇದ್ದು, ಫ್ರೆಂಚ್ ಇಲ್ಲ ಪಾಲಿಯೂರಿತೇನ್ ಬದಲು ಮೇಣವನ್ನು ಬಳಸಿ ಮೆರುಗನ್ನು ನೀಡಲಾಗುತ್ತದೆ. ವ್ಯಾಕ್ಸ್ ಪಾಲಿಷ್‌ನಲ್ಲೂ ಎರಡು ಮೂರು ಬಗೆಯ ಫಿನಿಶ್‌ಗಳಿದ್ದು, ಮ್ಯಾಟ್ ಫಿನಿಶ್ ಹೆಚ್ಚು ಜನಪ್ರಿಯವಾಗಿದೆ. ಮಿರಮಿರನೆ ಮಿಂಚುವಂತೆ ಮಾಡುವುದು ಈ ವಿಧಾನದಲ್ಲಿ ಸ್ವಲ್ಪ ಕಷ್ಟವಾಗಿರುವುದರ ಜೊತೆಗೆ, ಮೆಂಟೇನೆನ್ಸ್ ಕೂಡ ಕಷ್ಟ. ಹಾಗಾಗಿ, ಮೇಣದ ಪಾಲಿಷ್‌ನಲ್ಲಿ ನೈಸರ್ಗಿಕ ನೋಟ ಪಡೆಯುವಂತೆ ಬಿಡುವುದೇ ಹೆಚ್ಚು ಬಳಕೆಯಲ್ಲಿದೆ. ವ್ಯಾಕ್ಸ್ ಪಾಲಿಷ್ ಅನ್ನು ದುಬಾರಿ ಅಲ್ಲದ ಸಿಡಾರ್- ಪೈನ್, ಪಾರ್ಸಲ್ ಮರದ ಮರುಬಳಕೆಯಿಂದ ತಯಾರಾದ ವಸ್ತುಗಳಿಗೆ ಹೆಚ್ಚು ಬಳಸಲಾಗುತ್ತದೆ. ಧೂಳು ಮತ್ತೂಂದು ಮೇಣದ ಪಾಲಿಷ್‌ಗೆ ಅಂಟುವುದಾದರೂ, ಅದನ್ನೆಲ್ಲ ಸಾಮಾನ್ಯವಾಗಿ ಬಟ್ಟೆ ಬಳಸಿ ಒರೆಸಿಹಾಕಲು ಸಾಧ್ಯವಾಗುತ್ತದೆ. ಮಾರ್ಬಲ್ಸ್‌ಗೆ ನೋ ಪಾಲಿಷ್!
ಗ್ರಾನೈಟ್ ಮಾರ್ಬಲ್‌ಗಳಿಗೆ ಮುಖ್ಯವಾಗಿ ಅವುಗಳ ಗಟ್ಟಿತನವೇ ಒಳ್ಳೆಯ ಫಿನಿಶ್ ಪಡೆಯುವಂತೆ ಮಾಡುವುದರಿಂದ, ಹೆಚ್ಚುವರಿಯಾಗಿ ಕೃತಕ ಪಾಲಿಷ್‌ಗಳನ್ನು ಬೇಡುವುದಿಲ್ಲ. ಮಾರ್ಬಲ್‌ಗೆ ಮೇಣದ ಪಾಲಿಷ್ ಹಾಗೂ ಗ್ರಾನೈಟ್‌ಗೆ ಟಿನ್ ಆಕ್ಸೆ„ಡ್ ಒಳಗೊಂಡ ವಿಶೇಷ ಪಾಲೀಷ್ ಹಚ್ಚುವುದು ಇದೆಯಾದರೂ, ಈ ಮೇಲ್ಮೆ„ ಪದರ ಶೀಘ್ರದಲ್ಲಿ ಸವೆದುಹೋಗಿ, ಕಡೆಗೆ ಉಳಿಯುವುದು, ಈ ಕಲ್ಲುಗಳ ನೈಸರ್ಗಿಕ ಪಾಲಿಷ್ ಮಾತ್ರವೇ ಆಗಿರುತ್ತದೆ. ಡಿಫರೆಂಟ್ ಲುಕ್ಕಿಗೆ 9 ಸೀಕ್ರೆಟ್
1. ಟಚ್ ವುಡ್ ಮಾದರಿಯ ಪಾಲಿಯೂರಿತೇನ್ ಬಳಿಯಬೇಕು. ಇಲ್ಲವೇ ಸ್ಪ್ರೆà ಪಾಲಿಷ್‌ಗಳು ಈಗ ಟ್ರೆಂಡೀ.
2. ಬಾಗಿಲು, ಚೌಕಟ್ಟು, ಕಿಟಕಿ ಇತ್ಯಾದಿಗಳ ಬಡಗಿ ಕಾರ್ಯ ಮುಗಿದ ಮೇಲೆ, ಮರಳು ಕಾಗದ- ಸ್ಯಾಂಡ್ ಪೇಪರ್ ಬಳಸಿ ನುಣುಪಾಗುವ ತನಕ ಉಜ್ಜಬೇಕು.
3. ನ್ಯೂನತೆಗಳಿದ್ದರೆ ಮೂಲ ಮರದಲ್ಲಿರುವಂತೆಯೇ ಮ್ಯಾಚ್ ಮಾಡಿ ತುಂಬುವುದು ಜಾಣ್ಮೆ. ಇದಕ್ಕಂತಲೇ ವಿವಿಧ ಬಣ್ಣದ ಪುಡಿಗಳೂ ಲಭ್ಯ.
4. ತೇಗದ (ಟೀಕ್) ಮರವಾದರೆ ಅದಕ್ಕೆಂದೇ ತಯಾರಾದ ಪೌಡರ್‌ಗಳು ಸಿಗುತ್ತವೆ.
5. ರೋಸ್‌ವುಡ್‌ಗೆ ಗಾಢ ಕೆಂಪು ಬಣ್ಣದ ಪುಡಿಗಳು ಹೆಚ್ಚು ಆಕರ್ಷಣೆ ನೀಡುತ್ತವೆ.
6. ಮರ ಸಾಮಾನ್ಯವಾಗಿ ಇಡಿಯಾಗಿ ಒಂದೇ ಬಣ್ಣದಲ್ಲಿ ಇರುವುದಿಲ್ಲ. ಕಡಿಮೆ ಬಣ್ಣ ಇರುವೆಡೆ, ಸ್ವಲ್ಪ ಗಾಢ ಡಾರ್ಕ್ ಆಗುವಂತೆ ಪುಡಿ ಸವರಬೇಕು.
7. ಸಣ್ಣ ಸಣ್ಣ ಗುಳಿಗಳಿದ್ದಲ್ಲಿ ಫಿಲ್ಲರ್ ಪುಡಿಯನ್ನು ಮೆತ್ತಬೇಕು. ಬಳಿಕ ಅತಿ ನುಣ್ಣಗಿರುವ “ಝೀರೊ’ ಸ್ಯಾಂಡ್ ಪೇಪರ್‌ನಿಂದ ತೀಡಿ ಸೂ¾ತ್ ಮಾಡಬೇಕು.
8. ಮರದ ಉಪಕರಣಗಳಿಗೆ ಪಾಲಿಷ್ ಅನ್ನು ಸಾಮಾನ್ಯವಾಗಿ ಮೂರು ಪದರಗಳಲ್ಲಿ ಮಾಡುತ್ತಾರೆ.
9. ಫ್ರೆಂಚ್ ಪಾಲಿಶ್‌ನಲ್ಲಿ ತೀಡಿ ತೀಡಿ ಮಿರಮಿರನೆ ಮೆರುಗುವಂತೆ ಫಿನಿಶ್ ನೀಡುತ್ತಾರೆ. ಟಚ್‌ವುಡ್ ಮಾದರಿಯವಾದರೆ, ಸೂಕ್ತ ರೀತಿಯಲ್ಲಿ ಬಳಿದರೆ, ಪಾಲಿಷ್ ತನ್ನಿಂದತಾನೇ ಬರುತ್ತದೆ, ಅದನ್ನು ಮತ್ತೆ ಉಜ್ಜುವ ಅಗತ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ: 9844132826 – ಆರ್ಕಿಟೆಕ್ಟ್ ಕೆ. ಜಯರಾಮ್