Advertisement

ಹೂಡಿಕೆಯಲ್ಲಿ ಯಶ ಕಾಣಲೂ ಸೂತ್ರಗಳನ್ನು ಪಾಲಿಸ್ಪೇಕು!

12:24 PM Jun 04, 2018 | Harsha Rao |

ಬೇಕಾದಾಗ ಹಣ ಹೂಡುವ, ಬೇಕೆಂದಾಗ ತೆಗೆಯುವ ಅವಕಾಶ ಇರುವಂತೆ, ಮೂರು ವರ್ಷ ತೆಗೆಯುವುದಿಲ್ಲ. ದೀರ್ಘ‌ ಕಾಲದವರೆಗೆ ತೆಗೆಯುವುದೇ ಇಲ್ಲ ಎನ್ನುವಂತಹ ಫ‌ಂಡ್‌ಗಳೂ ಇವೆ. ತೆರಿಗೆ ಉಳಿತಾಯದ ಹಲವಾರು ಆಕರ್ಷಕ ಯೋಜನೆಗಳೂ ಇವೆ. ಮ್ಯೂಚುವಲ್‌ ಫ‌ಂಡ್‌ ಹೆಚ್ಚು ಹೆಚ್ಚು ಜನಪ್ರಿಯ ಆಗುವುದಕ್ಕೆ ಇಂತಹ ಆಯ್ಕೆಗಳೂ ಕಾರಣ.

Advertisement

ಈಗ ನಮಗೆ ಗೊತ್ತಾಗಿದೆ, ಮ್ಯೂಚುವಲ್‌ ಫ‌ಂಡ್‌ ಅಂದರೆ ಪರೋಕ್ಷವಾಗಿ ನಾವು ಷೇರು ಪೇಟೆಯಲ್ಲಿ ಹಣ ಹೂಡುವ ಅವಕಾಶ. ಷೇರು ಪೇಟೆಯಲ್ಲಿ ನೇರವಾಗಿ ಹಣಹೂಡಿಕೆ ರಿಸ್ಕ್ ಎಂದು ಭಾವಿಸುವವರು, ಷೇರು ಪೇಟೆಯಲ್ಲಿ ಅನುಭವ ಇಲ್ಲದವರು, ಮುಖ್ಯವಾಗಿ, ಯಾವ ಷೇರುಗಳನ್ನು ಖರೀದಿಸಬೇಕು ಎಂದು ಗೊತ್ತಾಗದವರು, ಷೇರು ಪೇಟೆಯ ಬಗೆಗೆ ತಿಳಿದುಕೊಳ್ಳುವುದಕ್ಕೆ ಬಿಡುವು ಇಲ್ಲದವರು…ಹೀಗೆ ಹಲವರಿಗೆ ಮ್ಯೂಚುವಲ್‌ ಫ‌ಂಡ್‌ ಸುಲಭದ ಆಯ್ಕೆ ಆಗಿದೆ.

ಷೇರು ಪೇಟೆಯಲ್ಲಿ ಸುಮಾರು 6000 ಕ್ಕೂ ಅಧಿಕ ಕಂಪನಿಗಳ ವಹಿವಾಟು ನಡೆಯುತ್ತದೆ. ಈ ಆರುಸಾವಿರ ಕಂಪನಿಗಳನ್ನು ಅವುಗಳ ಆಸ್ತಿ ಮೌಲ್ಯದ ಮೇಲೆ, ಅವುಗಳು ಯಾವ ವಲಯಕ್ಕೆ  ಸೇರಿವೆ ಎನ್ನುವುದರ ಮೇಲೆ ನಾವು ಹೇಗೆ ವಿಂಗಡಿಸುತ್ತೇವೋ ಅದೇ ರೀತಿ, ಮ್ಯೂಚುವಲ್‌ ಫ‌ಂಡ್‌ಗಳಲ್ಲೂ ಅವುಗಳು ಹಣ ಹೂಡುವ ರೀತಿ, ಕಂಪನಿಗಳನ್ನು ಆಧರಿಸಿ ವಿಭಾಗಗಳಿವೆ.

ಕೇವಲ ಬ್ಯಾಂಕಿಂಗ್‌ ಷೇರುಗಳಲ್ಲಿ ಹಣ ಹೂಡುವ ಮ್ಯೂಚುವಲ್‌ ಫ‌ಂಡ್‌ ಯೋಜನೆ ಇದೆ. ರಿಯಲ್‌ ಎಸ್ಟೇಟ್‌ ಕಂಪನಿಗಳಲ್ಲಿ ಮಾತ್ರ ಹಣ ಹೂಡುವ ಯೋಜನೆಗಳಿವೆ. ಸಣ್ಣ ಕಂಪನಿಗಳಲ್ಲಿ ಮಾತ್ರ ಹಣ ಹೂಡುವ, ಕೇವಲ ಏ ಗುಂಪಿನ ಷೇರುಗಳಲ್ಲಿ ಮಾತ್ರ ಹಣ ಹೂಡುವ ಯೋಜನೆಗಳಿವೆ. ಕೃಷಿ, ಬೃಹತ್‌ ಉದ್ಯಮ, ಮಾಹಿತಿ ತಂತ್ರಜಾnನ, ಟೆಲಿಕಾಮ್‌ ಹೀಗೆ ಹಲವಾರು ವಲಯಗಳ ಕಂಪನಿಗಳಲ್ಲಿ ಹಣ ಹೂಡುವ ಫ‌ಂಡ್‌ಗಳಿವೆ.

ಇವುಗಳೆಲ್ಲ ಯಾಕೆ ಇದೆ? 
ಈ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಉದಾಹರಣೆಗೆ, ನನಗೆ ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿರುವ ಯಾವುದಾದರೂ ಷೇರು ಕೊಳ್ಳಬೇಕು ಎಂಬ ಇಚ್ಛೆ ಇದೆ. ಮುಂದಿನ ಪ್ರಶ್ನೆ ಯಾವ ಬ್ಯಾಂಕಿನ ಷೇರುಗಳನ್ನು ಕೊಳ್ಳಲಿ?  ಯಾಕೆಂದರೆ ಮತ್ತೆ ಏಳುವ ಪ್ರಶ್ನೆ, ರಾಷ್ಟ್ರೀಕೃತ ಬ್ಯಾಂಕ್‌ ಆಗಬಹುದಾ? ಖಾಸಗಿ ಬ್ಯಾಂಕ್‌ ಆಗಬಹುದಾ? ಯಾವ ಬ್ಯಾಂಕಿನ ಷೇರು ಪರವಾಗಿಲ್ಲ. ಈಗ ಬ್ಯಾಂಕ್‌ ಷೇರುಗಳೆಲ್ಲ ಬಿದ್ದಿದೆ. ಜೊತೆಗೆ ಯಾವ ಬ್ಯಾಂಕ್‌ನ ಲಾಭ, ನಷ್ಟ ಏನಿದೆಯೋ? ಹೀಗೆ ಹಲವಾರು ರೀತಿಯ ಪ್ರಶ್ನೆಗಳು ಏಳುತ್ತದೆ. ನಮಗೆ ಬ್ಯಾಂಕಿಂಗ್‌ ಷೇರುಗಳು ಬೇಕು ತಾನೆ? ಹಾಗಾದರೆ ಯಾವುದಾದರೂ ಮ್ಯೂಚುವಲ್‌ ಫ‌ಂಡ್‌ನ‌ ಬ್ಯಾಂಕಿಂಗ್‌ ಫ‌ಂಡ್‌ನ‌ಲ್ಲಿ ಹಣ ಹೂಡಬಹುದಲ್ಲಾ? ಅವರು ಆಯ್ದ ಬ್ಯಾಂಕಿನ ಷೇರುಗಳಲ್ಲಿ ಹಣ ಹೂಡುತ್ತಾರೆ. ಸೆಕ್ಟರ್‌ ಫ‌ಂಡ್‌ ಎಂದು ಕರೆಯುವ, ಆಯಾ ವಲಯಕ್ಕೆ ಸಂಬಂಧಿಸಿದ ಷೇರುಗಳಲ್ಲಿ ಹಣ ಹೂಡುವುದು ಒಂದು ರೀತಿ ಆದರೆ, ಷೇರು ಪೇಟೆಯಲ್ಲಿ ವಹಿವಾಟಾಗುವ ಮುಂಚೂಣಿಯಲ್ಲಿರುವ 50 ಷೇರುಗಳಲ್ಲಿ ಹಣ ಹೂಡುತ್ತೇನೆ ಎಂದೂ ಹೇಳಬಹುದು.

Advertisement

ಬೇಕಾದಾಗ ಹಣ ಹೂಡುವ, ಬೇಕೆಂದಾಗ ತೆಗೆಯುವ ಅವಕಾಶ ಇರುವಂತೆ, ಮೂರು ವರ್ಷ ತೆಗೆಯುವುದಿಲ್ಲ. ದೀರ್ಘ‌ ಕಾಲದವರೆಗೆ ತೆಗೆಯುವುದೇ ಇಲ್ಲ ಎನ್ನುವಂತಹ ಫ‌ಂಡ್‌ಗಳೂ ಇವೆ. ತೆರಿಗೆ ಉಳಿತಾಯದ ಹಲವಾರು ಆಕರ್ಷಕ ಯೋಜನೆಗಳೂ ಇವೆ. ಮ್ಯೂಚುವಲ್‌ ಫ‌ಂಡ್‌ ಹೆಚ್ಚು ಹೆಚ್ಚು ಜನಪ್ರಿಯ ಆಗುವುದಕ್ಕೆ ಇಂತಹ ಆಯ್ಕೆಗಳೂ ಕಾರಣ. ಪ್ರತಿ ತಿಂಗಳು ಆರ್‌.ಡಿ ಕಟ್ಟಿದ ಹಾಗೇ ಕಟ್ಟುವ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ (ಸಿಪ್‌) ಈಗ ಬಹಳ ಚಾಲ್ತಿಯಲ್ಲಿದೆ.

 ಪ್ರತಿ ಹೂಡಿಕೆಯ ಅವಕಾಶ ಕೂಡ ಹೂಡುವವರ ಅಗತ್ಯಕ್ಕೆ ರೂಪಿಸಲಾದರೂ ನಮಗೆ ಯಾವುದು ಸರಿ ಹೋಗುತ್ತದೆ, ಯಾಕೆ ನಾನು ಇದನ್ನು ಆಯ್ಕೆ ಮಾಡಿಕೊಂಡೆ ಎನ್ನುವುದರ ಬಗೆಗೆ ನಮಗೆ ಅತ್ಯಂತ ಸ್ಪಷ್ಟತೆ ಇರಲೇ ಬೇಕು. ಯಾವುದೇ ಹೂಡಿಕೆ ಆಗಿರಲಿ, ನಾನು ಯಾಕೆ ಹೂಡಿಕೆ ಮಾಡುತ್ತಿದ್ದೇನೆ? ಇದರಿಂದ ನಾನು ಎಷ್ಟು ಮತ್ತು ಏನನ್ನು ನಿರೀಕ್ಷಿಸುತ್ತಿದ್ದೇನೆ? ಈ ಹೂಡಿಕೆ ನನಗೆ ಯಾಕೆ ಸೂಕ್ತವಾಗಿದೆ? ಇಂತಹ ಪ್ರಶ್ನೆಗಳಿಗೆ ನಾವು ಕಂಡುಕೊಳ್ಳುವ ಉತ್ತರಗಳೇ, ನಮ್ಮನ್ನು ಉತ್ತಮ ಮತ್ತು ಯಶಸ್ವಿ ಹೂಡಿಕೆದಾರರನ್ನಾಗಿ ಮಾಡುತ್ತದೆ.

– ಸುಧಾಶರ್ಮ ಚವತ್ತಿ

Advertisement

Udayavani is now on Telegram. Click here to join our channel and stay updated with the latest news.

Next