Advertisement

Police ಠಾಣೆಯಲ್ಲಿ ರಾಖಿ ಕಟ್ಟಿ ಶುಭ ಕೋರಿದ ಮಹಿಳಾ ಪೊಲೀಸರು

05:10 PM Aug 30, 2023 | Team Udayavani |

ಗಂಗಾವತಿ: ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರು ಠಾಣೆಯ ಪೊಲೀಸರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಪಿಎಸೈ ಕಾಮಣ್ಣ ಮಾತನಾಡಿ, ಅಣ್ಣ ತಂಗಿಯರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಅಣ್ಣ ತಂಗಿ ಹಾಗೂ ಅಕ್ಕ ತಮ್ಮಂದಿರರ ನಡುವಿನ ಪವಿತ್ರವಾದ ಪ್ರೀತಿಗೆ, ಈ ದಿನ ಸಮರ್ಪಣೆಯಾಗಿದೆ. ಸಹೋದರಿಯೊಬ್ಬಳು ತನ್ನ ಸಹೋದರರ ಕೈಗೆ ಕಟ್ಟುವ ರೇಷ್ಮೆ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಸಂಕೇತ. ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಾಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಪರಸ್ಪರ ಬಾಂಧವ್ಯವನ್ನು ಸಾರುವ ಈ ಹಬ್ಬವು ಪ್ರತಿಯೊಬ್ಬರ ಬಾಲ್ಯದ ನೆನಪುಗಳಿಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗಂಗಾವತಿ ನಗರ ಪೊಲೀಸ್ ಠಾಣೆಯ ಎ.ಎಸ್.ಐ ಸಿದ್ರಾಮಯ್ಯಸ್ವಾಮಿ,ವಿರೇಶ.ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ಭೀಮಣ್ಣ ಮೇಟಿ.ಗಂಗಾ ರಾಮಸಿಂಗ್, ಅಂಕಿತಾ, ಪ್ರತಿಭಾ, ಕಾವೇರಿ, ನಿಲ್ಲಮ್ಮ, ಮಾಲತಿ,ಚಿರಂಜೀವಿ, ವಿಶ್ವನಾಥ,ಮರಿಯಪ್ಪ ಹಾದಿಮನಿ.ರಮೇಶ್. ವಿಜಯಕಾಂತ್,ಪ್ರಭಾಕರ್. ಶ್ರೀಶೈಲ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next