Advertisement

ಕಾನ್‌ಸ್ಟೆಬಲ್‌ ಅಪಹರಿಸಿ ಹತ್ಯೆಗೈದ ಉಗ್ರರು

06:00 AM Jul 22, 2018 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್‌ ಜಿಲ್ಲೆಯಲ್ಲಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದ ಸಲೀಮ್‌ ಶಾ ಎಂಬ ಪೊಲೀಸ್‌ ಕಾನ್‌ಸ್ಟೆಬಲ್‌ರ ಮೃತದೇಹ ಶನಿವಾರ ಪತ್ತೆಯಾಗಿದೆ. ಶಾ ಅವರು ರಜೆಯ ನಿಮಿತ್ತ ಮನೆಗೆ ಬಂದಿದ್ದಾಗ, ಶುಕ್ರವಾರ ರಾತ್ರಿ ಅವರನ್ನು ಉಗ್ರರು ಅಪಹರಿಸಿದ್ದರು. ಕಳೆದ ತಿಂಗಳಷ್ಟೇ ಉಗ್ರರು ಯೋಧ ಔರಂಗಬೇಜ್‌ರನ್ನು ಅಪಹರಿಸಿ, ಹತ್ಯೆಗೈದಿದ್ದ ಘಟನೆ ಶೋಪಿಯಾನ್‌ನಲ್ಲಿ ನಡೆದಿತ್ತು. ಮತ್ತೂಂದು ಘಟನೆಯಲ್ಲಿ ಉಗ್ರರು ಅನಂತನಾಗ್‌ ಮತ್ತು ಕುಲ್ಗಾಂವ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next