Advertisement

ಪೊಲೀಸ್‌ ಪತ್ನಿಗೆ ಚುಡಾವಣೆ ಪ್ರಕರಣ:ಪೊಲೀಸ್‌ ಪ್ರಕಾಶ್‌ ಅಮಾನತು ರದ್ದು

02:18 PM Apr 15, 2017 | |

ಉಡುಪಿ: ಮಲ್ಪೆಯ ಪೊಲೀಸ್‌ ಕಾನ್ಸ್‌ಟೆಬಲ್‌ ಪ್ರಕಾಶ್‌ ಅವರ ಅಮಾನತು ಆದೇಶವನ್ನು ಶುಕ್ರವಾರ ಹಿಂಪಡೆಯಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್‌ಪಿ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

Advertisement

ಪತ್ನಿಯನ್ನು ಚುಡಾಯಿಸಿದ ಕುಮಾರ್‌ ಅವರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಪ್ರಕಾಶ್‌ ಅವರನ್ನು ಅಮಾನತು ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಪೊಲೀಸ್‌ ಅಧಿಕಾರಿಗಳನ್ನು ಉಡುಪಿ ಎಸ್‌ಪಿ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಸಮಗ್ರ ಮಾಹಿತಿ ಪಡೆದಿದ್ದರು.

ಮೇಲಧಿಕಾರಿಗಳ ಸೂಚನೆ ಯಂತೆ ಪೊಲೀಸ್‌ ಪ್ರಕಾಶ್‌ ಅವರ ಅಮಾನತು ಆದೇಶವನ್ನು ಹಿಂಪಡೆದು ಅವರನ್ನು ಕಾರ್ಕಳ ನಗರ ಠಾಣೆಗೆ ನಿಯೋಜಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಪ್ರಕಾಶ್‌ ಮನವಿಯಂತೆ ವರ್ಗ ಮಲ್ಪೆ ಠಾಣೆಯಿಂದ ಬೇರೆ ಠಾಣೆಗೆ ವರ್ಗಾಯಿಸುವಂತೆ ಪ್ರಕಾಶ್‌ ಮನವಿ ಮಾಡಿದ್ದು, ಅದರಂತೆ ಕಾರ್ಕಳ ನಗರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ ಪ್ರತಿಭಟನೆಗೆ ಮುಂದಾಗಿದ್ದರು ಪೊಲೀಸ್‌ ಪ್ರಕಾಶ್‌ ಅಮಾನತು ಖಂಡಿಸಿ ರಾಜ್ಯ ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್‌ ಅವರ ಕರೆಯಂತೆ ಎ. 15ರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಜಿಲ್ಲೆಯ ಪೊಲೀಸರು ಮುಂದಾಗಿದ್ದರು ಕೊನೆ ಕ್ಷಣದಲ್ಲಿ ಮಾತುಕತೆ ನಡೆದ ಕಾರಣ ಪ್ರತಿಭಟನೆ ಮುಂದೂಡ ಲಾಗಿತ್ತು. ಆರಂಭದಲ್ಲಿ ಆಂತರಿಕ ಪ್ರತಿಭಟನೆ ಮತ್ತು ಬಳಿಕ ಸಂಘ ಸಂಸ್ಥೆಗಳ ನೆರವಿನಿಂದ ಪ್ರತಿಭಟನೆ ನಡೆಸಲು ಆಲೋಚಿಸಲಾಗಿತ್ತು.

ಮನವೊಲಿಸಿದ 
ಹಿರಿಯ ಅಧಿಕಾರಿಗಳು

ಪ್ರಕರಣದ ಕುರಿತು ಹೋರಾಟಗಾರ ವಿ. ಶಶಿಧರ್‌ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಎ. 15ರಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ನಿರ್ಧರಿಸಿದ್ದು ಹೌದು. ಈ ವಿಷಯ ತಿಳಿದ ಪೊಲೀಸ್‌ ಗುಪ್ತಚರ, ಇನ್ನಿತರ ವಿಭಾಗದ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿ ಪ್ರತಿಭಟನೆ ಹಿಂದೆಗೆದು ಕೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆ ಮುಂದೂಡಲಾಗಿತ್ತು ಎಂದಿದ್ದಾರೆ.

Advertisement

ಸಿಬಿಐ ತನಿಖೆಗೆ ಆಗ್ರಹ
ಈವರೆಗೂ ತನಿಖೆ ಸಮ ರ್ಪಕವಾಗಿ ನಡೆದಿಲ್ಲ. ಆದುದರಿಂದ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಎಂದು ಹೈಕೋರ್ಟಿಗೆ ರಿಟ್‌ ಅರ್ಜಿ ಸಲ್ಲಿಸಲಿದ್ದೇನೆ ಎಂದು ವಿ. ಶಶಿಧರ್‌ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next