Advertisement

Dandeli: ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕರು: ಎಚ್ಚರಿಕೆ ನೀಡಿದ ಪೊಲೀಸರು

03:53 PM Aug 27, 2023 | Team Udayavani |

 

Advertisement

ದಾಂಡೇಲಿ: ನಗರದ ಹಳೆ ದಾಂಡೇಲಿಯ ಹಾರ್ನಬಿಲ್ ಸಭಾಭವನದ ಸಮೀಪ ಸ್ವಾಮಿಲ್ಗೆ ಹೋಗುವ ರಸ್ತೆ ಪಕ್ಕದ ನಿರ್ಜನ ಪ್ರದೇಶದಲ್ಲಿರುವ ವಾಟರ್ ಟ್ಯಾಂಕ್ ಬಳಿ ಅಪ್ರಾಪ್ತ ಬಾಲಕರಿಬ್ಬರು ಮಾದಕ ವಸ್ತು ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ನಗರ ಠಾಣೆಯ ಪೊಲೀಸರು ಆ ಇಬ್ಬರು ಅಪ್ರಾಪ್ತ ಬಾಲಕರಿಗೆ ಎಚ್ಚರಿಕೆ ನೀಡಿದ ಘಟನೆ ಆ.27ರ ಭಾನುವಾರ ನಡೆದಿದೆ.

ಇಲ್ಲಿ ವಾಟರ್ ಟ್ಯಾಂಕ್ ಬಳಿ ಪ್ರತಿದಿನ ಯುವಕರ ತಂಡವನ್ನು ಕಟ್ಟಿಕೊಂಡು ಬಂದು ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪಿಎಸ್ಐ ಐ.ಆರ್.ಗಡ್ಡೇಕರ್ ಮಾರ್ದರ್ಶನದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದ ಹಿನ್ನಲೆಯಲ್ಲಿ ಅವರಿಬ್ಬರನ್ನು ನಗರ ಠಾಣೆಗೆ ಕರೆದುಕೊಂಡು ಹೋಗಿ ಬುದ್ಧಿ ಮಾತು ಹೇಳಿ ಎಚ್ಚರಿಕೆಯನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next