ಬೆಂಗಳೂರು: ಬಿಎಂಟಿಸಿ ಡಿಪೋಗೆ ಬಂದು ಹೊಸ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ)ಯಾಗಿ ನೇಮಕಗೊಂಡಿರುವುದಾಗಿ ಬಸ್‌ಗಳ ಪರಿಶೀಲಿಸಲು ಮುಂದಾಗಿದ್ದ ವಂಚಕನನ್ನು ಡಿಪೋ ಸಿಬ್ಬಂದಿಯೇ ಪೊಲೀಸರಿಗೊಪ್ಪಿಸಿದ್ದಾರೆ.
ಯಶವಂತಪುರ ಬಿಎಂಟಿಸಿ ಡಿಪೋದ ಅಸಿಸ್ಟೆಂಟ್ ಟ್ರಾμಕ್ ಮೇಲ್ವಿಚಾರಕ ಮೋಹನ್ ಬಾಬು ಎಂಬುವರು ಕೊಟ್ಟ ದೂರಿನ ಮೇರೆಗೆ ಸುಬೇಧಾರ್‌ಪಾಳ್ಯದ ನಿವಾಸಿ ನೂರ್ ಅಹಮ್ಮದ್ (35)ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಅ.10ರಂದು ಯಶವಂತಪುರದ ಬಿಎಂಟಿಸಿ ಡಿಪೋಗೆ ಬಂದ ಆರೋಪಿ ನೂರ್ ಮೊಹಮ್ಮದ್ ಟಿಟಿಎಂಸಿಗೆ ಭೇಟಿ ನೀಡಿದ್ದ. ಈ ವೇಳೆ ತಾನು ಬಿಎಂಟಿಸಿ ಉತ್ತರ ವಲಯಕ್ಕೆ ಹೊಸದಾಗಿ ಬಂದಿರುವ ಡಿಸಿ ಎಂದು ಪರಿಚಯಿಸಿಕೊಂಡಿದ್ದ.
ಇದನ್ನೂ ಓದಿ:- ಯುವಕನ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು
ಇನ್ನು ಮುಂದೆ ನಾನು ಹೇಳಿದ ಹಾಗೆ ಕೆಲಸಗಳು ಆಗಬೇಕು. ಅ.11ರಂದು ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂದು ಹೇಳಿ ಹೋಗಿದ್ದ. ಮರುದಿನ ಘಟಕ 8ರ ಬಳಿ ಹೋಗಿ ಪಾರುಪತ್ತೆದಾರರಾದ ಹರ್ಷವರ್ಧನ್‌ರನ್ನು ಪರಿಚಯ ಮಾಡಿಕೊಂಡು ವಾಹನಗಳನ್ನು ನಿಲ್ಲಿಸಿ ಪರಿಶೀಲಿಸಿದ್ದ. ಆ ವೇಳೆ ನೂರ್ ಅಹಮ್ಮದ್ ಬಗ್ಗೆ ಅನುಮಾನ ಬಂದು ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಗೆ ಈ ಬಗ್ಗೆ ಮಾಹಿತಿ ನೀಡಿದಾಗ, ಇಂಥ ಹೆಸರಿನ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಆಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋ ಪಿಯನ್ನು ಡಿಪೋ ಸಿಬ್ಬಂದಿಯೇ ಒಪ್ಪಿಸಿದ್ದಾರೆ ಎಂದು ಪೊಲೀಸರು ಹೇಳಿದರು.