ಕಾಸರಗೋಡು: ಮಹಿಳೆಯರಿಗೆ ಸ್ವಯಂ ರಕ್ಷಣೆಗಾಗಿ ದೈಹಿಕ ಕದನ ಕಲೆಗಳನ್ನು ನೀಡುವ ಮೂಲಕ ರಾಜ್ಯದ ಪೊಲೀಸ್ ಇಲಾಖೆ ಗಮನ ಸೆಳೆಯುತ್ತಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಈ ಕದನ ಕಲೆಗಳ ತರಬೇತಿ ನಡೆಸಲಾಗುತ್ತಿದೆ.
ಕಾಂಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ಪ್ರತ್ಯೇಕ ಸಭಾಂಗಣ ದಲ್ಲಿ ಮಹಿಳೆಯರಿಗೆ ಶಾರೀರಿಕ ಯುದ್ಧ ಕಲೆ ಪೊಲೀಸ್ ಇಲಾಖೆ ವತಿ ಯಿಂದ ಕಲಿಸಲಾಗುತ್ತಿದೆ. ಅರ್ಧ ತಾಸಿನ ಈ ತರಬೇತಿ ಯಲ್ಲಿ ಸ್ವಯಂ ರಕ್ಷಣೆಗೆ ಮಹಿಳೆಯರು ಬಳಸಬಹುದಾದ ಕಸರತ್ತುಗಳನ್ನು ಕಲಿಸಿಕೊಡಲಾಗುತ್ತಿದೆ. ಪೊಲೀಸ್ ಮಹಿಳಾ ಘಟಕದ ಸಿಬಂದಿ ಪ್ರಸೀದಾ, ನೀಲೇಶ್ವರ ಠಾಣೆಯ ಸಿಬಂದಿ ಪಿ. ಆದಿರಾ, ರಾಜಪುರಂ ಠಾಣೆಯ ಸಿವಿಲ್ ಪೊಲೀಸ್ ಅಧಿ ಕಾರಿ ಸಿ.ಸಿ. ಸುಜಾತಾ ತರಬೇತಿಗೆ ನೇತೃತ್ವ ನೀಡುತ್ತಿದ್ದಾರೆ.
2015ರಿಂದ ಕೇರಳ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಮಹಿಳೆಯರಿಗಾಗಿ ಸ್ವಯಂ ರಕ್ಷಣೆ ಸಂಬಂಧ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಾತ್ರ 50 ಸಾವಿರಕ್ಕೂ ಅ ಧಿಕ ಮಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಶಾಲೆ, ಕಾಲೇಜು ಮಟ್ಟದಲ್ಲೂ, ಕುಟುಂಬಶ್ರೀ ಸದಸ್ಯೆಯರಿಗೂ ತರಬೇತಿ ನೀಡುವ ಕಾಯಕ ನಡೆಯುತ್ತಿದೆ. ಮಹಿಳಾ ಸಬಲೀಕರಣ ಈ ಯೋಜನೆಯ ಪ್ರಧಾನ ಉದ್ದೇಶ. ಕೇರಳ ಪೊಲೀಸ್ ಇಲಾಖೆಯ ಮಾಹಿತಿ ಕೇಂದ್ರ ಪ್ರಕಟಿಸಿದ ಮಹಿಳೆಯರ ಸ್ವಯಂ ಸಂರಕ್ಷಣೆ ಸಂಬಂಧ ಪುಸ್ತಕವೂ ಇಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ. ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ನಡೆಸಿದ ಅನೇಕ ಚಟುವಟಿಕೆಗಳ ಚಿತ್ರ ಪ್ರದರ್ಶನವೂ ಇಲ್ಲಿ ಜನರನ್ನು ಆಕರ್ಷಿಸುತ್ತಿದೆ. ಕೇರಳ ಪೊಲೀಸರು ಸಿದ್ಧಪಡಿಸಿದ “ಸ್ಟ್ರೇಂಜರ್’ ಎಂಬ ಕಿರುಚಿತ್ರ, ವಿವಿನ್ ಅನಘಾ ಎಂಬ ನಾಟಕ ಪ್ರದರ್ಶಿಸಲಾಗುತ್ತಿದೆ.
ಈಗ 25ಕ್ಕೂ ಅ ಧಿಕ ಮಂದಿಗೆ ಇಲ್ಲಿ ತರಬೇತಿ ನೀಡಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
ಸಹಾಯವಾಣಿ
ಮಹಿಳೆ ಯರಿಗೆ ಪೊಲೀಸರ ಸಹಾಯ ಬೇಕಾದಲ್ಲಿ ಸಂಪಪರ್ಕಿ ಸಬೇಕಾದ ಸಹಾಯವಾಣಿ ಸಿದ್ಧ ವಾಗಿದೆ. ನಂಬ್ರ: 112, 1090. 1515, 1091.