Advertisement

ಜಿಲ್ಲಾದ್ಯಂತ ಖಾಕಿ ಕಣ್ಗಾವಲು

09:22 PM Apr 17, 2019 | Team Udayavani |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಇಂದು ಮತದಾನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸ್‌ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ಹೈಲರ್ಟ್‌ ಘೋಷಿಸಿದ್ದು, ಕೇಂದ್ರ ಮೀಸಲು ಅರೆ ಸೇನಾ ಪಡೆ ಸೇರಿದಂತೆ ಸುಮಾರು 2500 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಚುನಾವಣಾ ಬಂದೋಬಸ್ತ್ಗೆ ನಿಯೋಜಿಸಲಾಗಿದೆ.

Advertisement

ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 1,285 ಮತಗಟ್ಟೆ ಕೇಂದ್ರಗಳಿದ್ದು, ಮತದಾನದ ವೇಳೆ ಯಾವುದೇ ರಾಜಕೀಯ ಸಂಘರ್ಷ ನಡೆಯದಂತೆ ಪೊಲೀಸ್‌ ಇಲಾಖೆ ಹದ್ದಿನ ಕಣ್ಣು ಇಟ್ಟು ಜಿಲ್ಲೆಯಲ್ಲಿ ಅತೀ ಸೂಕ್ಷ್ಮ, ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಿಗೆ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಿದೆ.

ಗೌರಿಬಿದನೂರು: ಜಿಲ್ಲೆಯಲ್ಲಿ ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿರುವ ಪೊಲೀಸ್‌ ಇಲಾಖೆ ಜಿಲ್ಲೆಯ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಗೌರಿಬಿದನೂರು ತಾಲೂಕಿಗೆ 2 ಡಿವೈಎಸ್‌ಪಿ, 3 ಸಿಪಿಐ, 4 ಪಿಎಸ್‌ಐ, 10 ಎಎಸ್‌ಐ, ಎಚ್‌ಸಿ 31, 132 ಪಿಸಿ ಹಾಗೂ 160 ಮಂದಿ ಗೃಹ ರಕ್ಷಕರು ಸೇರಿ ಒಟ್ಟು 342 ಮಂದಿಯನ್ನು ನಿಯೋಜಿಸಿದೆ.

ಬಾಗೇಪಲ್ಲಿ: ತಾಲೂಕಿಗೆ 1 ಡಿವೈಎಸ್‌ಪಿ, 4 ಸಿಪಿಐ, 17 ಪಿಎಸ್‌ಐ, 17 ಎಎಸ್‌ಐ, 51 ಎಚ್‌ಸಿ, 147 ಪಿಸಿ ಹಾಗೂ 195 ಗೃಹ ರಕ್ಷಕರು ಸೇರಿ ಒಟ್ಟು 419 ಮಂದಿಯನ್ನು ನಿಯೋಜಿಸಲಾಗಿದೆ.

ಚಿಕ್ಕಬಳ್ಳಾಪುರ: ತಾಲೂಕಿಗೆ 1 ಡಿವೈಎಸ್‌ಪಿ, 4 ಸಿಪಿಐ, 6 ಪಿಎಸ್‌ಐ, 34 ಎಎಸ್‌ಐ, 65 ಎಚ್‌ಸಿ, 133 ಪಿಸಿ, 191 ಗೃಹ ರಕ್ಷಕರು ಸೇರಿ ಒಟ್ಟು 434 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Advertisement

ಶಿಡ್ಲಘಟ್ಟ: ತಾಲೂಕಿನಲ್ಲಿ 1 ಡಿವೈಎಸ್‌ಪಿ, 3 ಸಿಪಿಐ, 4 ಪಿಎಸ್‌ಐ, 10 ಎಎಸ್‌ಐ, 58 ಎಚ್‌ಸಿ, 137 ಪಿಸಿ, 177 ಗೃಹ ರಕ್ಷಕರು ಸೇರಿ ಒಟ್ಟು 390 ಮಂದಿಯನ್ನು ನಿಯೋಜಿಸಲಾಗಿದೆ.

ಚಿಂತಾಮಣಿ: ತಾಲೂಕಿಗೆ 1, ಡಿವೈಎಸ್‌ಪಿ, 4 ಸಿಪಿಐ, 4 ಪಿಎಸ್‌ಐ, 19 ಎಎಸ್‌ಐ, 78 ಎಚ್‌ಸಿ, 148 ಪಿಸಿ, 124 ಗೃಹ ರಕ್ಷಕರು ಸೇರಿ ಒಟ್ಟು 378 ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ ಬಾಬು ತಿಳಿಸಿದ್ದಾರೆ.

ವಿವಿಧ ತಂಡಗಳ ರಚನೆ: ಮತದಾನದ ವೇಳೆ ಎದುರಾಗುವ ಅಥವಾ ಸಂಭವಿಸುವ ಅಹಿತಕರ ಘಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಲು ಪೊಲೀಸ್‌ ಇಲಾಖೆ ವಿವಿಧ ತಂಡಗಳನ್ನು ರಚಿಸಿದೆ.

ಜಿಲ್ಲೆಯಲ್ಲಿ 4 ಸೆಕ್ಟರ್‌ ಮೊಬೈಲ್‌ ತಂಡ, 4 ಮೇಲ್ವಿಚಾರಣ ಮೊಬೈಲ್‌ ತಂಡಗಳನ್ನು ಮುಖ್ಯ ಪೊಲೀಸ್‌ ಪೇದೆ ಹಾಗೂ ಗೃಹ ರಕ್ಷಕರನ್ನು ಒಳಗೊಂಡಂತೆ ರಚಿಸಲಾಗಿದ್ದು, ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಚರಣೆ ನಡೆಸಿ ಮತದಾನದ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಿವೆ.

ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ 6 ಡಿವೈಎಸ್‌ಪಿ, 18 ಸಿಪಿಐ, 22 ಪಿಎಸ್‌ಐ, 90 ಎಎಸ್‌ಐ, 283 ಮುಖ್ಯ ಪೊಲೀಸ್‌ ಪೇದೆ, 697 ಪೇದೆ ಹಾಗೂ 847 ಮಂದಿ ಗೃಹ ರಕ್ಷಕರು ಸೇರಿ ಒಟ್ಟು 1,963 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ 9, 5 ಕೆಎಸ್‌ಆರ್‌ಪಿ ಹಾಗೂ ಎರಡು ಕೇಂದ್ರ ಮೀಸಲು ಅರೆ ಸೇನಾ ಪಡೆಗಳನ್ನು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.
-ಕೆ.ಸಂತೋಷಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next