Advertisement

Mysore: ಮನೋರಂಜನ್‌ ನಿವಾಸದ ಮೇಲೆ ಪೊಲೀಸ್‌ ಕಣ್ಗಾವಲು

11:42 PM Dec 14, 2023 | Team Udayavani |

ಮೈಸೂರು: ಸಂಸತ್‌ ಭವನಕ್ಕೆ ನುಗ್ಗಿ ಕೋಲಾಹಲ ಎಬ್ಬಿಸಿದ ಆರೋಪಿ ಮನೋರಂಜನ್‌ನ ವಿಜಯನಗರದಲ್ಲಿರುವ ನಿವಾಸದ ಮೇಲೆ ಪೊಲೀಸರು ಕಣ್ಗಾವಲಿರಿಸಿದ್ದು, ಗುರುವಾರ ಬೆಳಗ್ಗೆ ಮನೆ ಬಳಿ ಆಗಮಿಸಿದ ಪೊಲೀಸರ ವಿವಿಧ ತಂಡಗಳು ನಿವಾಸದ ಸುತ್ತ ಮುತ್ತಲಿನ ಮನೆಯವರ ವಿಚಾರಣೆ ನಡೆಸಿದರು. ಕೇಂದ್ರ ಗುಪ್ತಚರ ಇಲಾಖೆ ಮೈಸೂರು ವಿಭಾಗದ ಉಪನಿರ್ದೇಶಕ ಪ್ರವೀಣ್‌ ನೇತೃತ್ವದಲ್ಲಿ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದರಲ್ಲದೆ, ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದರು.

Advertisement

ಮೈಸೂರಿಗೆ ಬಂದಿದ್ದ ಸಾಗರ್‌ ಶರ್ಮ
ಮತ್ತೂಬ್ಬ ಆರೋಪಿ ಉತ್ತರ ಪ್ರದೇಶದ ಸಾಗರ್‌ ಶರ್ಮ ಮೈಸೂರಿನಲ್ಲಿ ರುವ ಮನೋ ರಂಜನ್‌ ಮನೆಗೆ ಭೇಟಿ ನೀಡಿದ್ದ ಎಂಬ ಮಾಹಿತಿಯಿದೆ. ಕಳೆದ ಮೇ ತಿಂಗಳಿನಲ್ಲಿ ಸಾಗರ್‌ ಶರ್ಮ ಮೈಸೂರಿಗೆ ಆಗಮಿಸಿ, ಮನೋ ರಂಜನ್‌ ಮನೆಗೆ ಭೇಟಿ ನೀಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಪ್ಪನ ಪರಿಚಯ ಹೇಳಿ ಪಾಸ್‌ ಪಡೆದಿದ್ದ
ತಂದೆ ದೇವರಾಜೇ ಗೌಡರ ಪರಿಚಯ ಹೇಳಿಕೊಂಡು ಸಂಸದ ಪ್ರತಾಪಸಿಂಹ ಕಚೇರಿಯಿಂದ ಮನೋರಂಜನ್‌ ಪಾಸ್‌ ಪಡೆದಿರುವುದು ಗೊತ್ತಾಗಿದೆ. ತಾನು ಮೈಸೂರಿನ ವಿಜಯನಗರ ನಿವಾಸಿ. ತನ್ನ ತಂದೆ ದೇವರಾಜೇಗೌಡ ಎಂದು ತನ್ನನ್ನು ಪರಿಚಯ ಮಾಡಿಕೊಂಡು ಪ್ರತಾಪಸಿಂಹ ಬಳಿ ಪಾಸ್‌ಗೆ ಮನೋರಂಜನ್‌ ಅನುಮತಿ ಪಡೆದುಕೊಂಡಿರುವುದು ತನಿಖೆ ವೇಳೆ ಮಾಹಿತಿ ಲಭ್ಯ ವಾ ಗಿದೆ.

ಶೂ ಪರಿಶೀಲಿಸದಿರುವುದನ್ನು ಖಚಿತಪಡಿಸಿಕೊಂಡಿದ್ದ!
ಸಂಸತ್ತಿನಲ್ಲಿ ಶೂ ತಪಾಸಣೆ ಮಾಡುವುದಿಲ್ಲ ಎಂಬುದನ್ನು ಮನೋರಂಜನ್‌ ಜುಲೈ ತಿಂಗಳಲ್ಲೇ ಖಚಿತಪಡಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಸಂಸತ್‌ ಭವನದ ಮೇಲೆ ದಾಳಿ ಮಾಡಿದ ಓರ್ವ ಮೈಸೂರಿನವನು. ಅಲ್ಲದೆ, ಒಳಗೆ ನುಗ್ಗಿರುವವರು ಸಂಸದ ಪ್ರತಾಪಸಿಂಹ ಕಚೇರಿಯಿಂದ ಪಾಸ್‌ ಪಡೆದು ಹೋಗಿದ್ದಾರೆ. ಹಾಗಾಗಿ ಪ್ರತಾಪ್‌ ಸಿಂಹ ಅವರನ್ನೇ ನೇರ ಹೊಣೆ ಮಾಡಬೇಕು.
-ಡಾ| ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ

Advertisement

ಸಂಸತ್‌ ಭವನಕ್ಕೆ ನುಗ್ಗಿದ ಆರೋಪಿ ಮನೋರಂಜನ್‌ ಸಂಸದ ಪ್ರತಾಪ್‌ಸಿಂಹ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿಯಾಗಿದ್ದಾನೆ. ಹೀಗಾಗಿ ಪ್ರತಾಪ್‌ ಸಿಂಹ ಅವರ ಕಚೇರಿಯನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆ ನಡೆಸಬೇಕು.
-ಎಂ.ಲಕ್ಷ್ಮಣ್‌, ಕೆಪಿಸಿಸಿ ವಕ್ತಾರ

 

Advertisement

Udayavani is now on Telegram. Click here to join our channel and stay updated with the latest news.

Next