ಬೆಂಗಳೂರು: ಕನ್ನಡ ಪರ ಸಂಘಟನೆ ಗಳು ಬುಧವಾರ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋ ಬಸ್ತ್ ಕೈಗೊಳ್ಳಲಾಗಿದೆ. ಮೆರವಣಿಗೆ ಮತ್ತು ಪ್ರತಿಭಟನೆ ನಡೆಸಲು ಜಿಲ್ಲಾ ವರಿಷ್ಠಾ ಧಿಕಾರಿಗಳು, ಕಮಿಷನರೇಟ್ ವ್ಯಾಪ್ತಿ ಯಲ್ಲಿ ಪೊಲೀಸ್ ಆಯುಕ್ತರು ಅನುಮತಿ ಕಡ್ಡಾಯಗೊಳಿಸಲಾಗಿದೆ.
ಸಾರ್ವಜನಿಕರಿಗೆ ತೊಂದರೆ ಕೊಡುವುದು, ಬಲವಂತವಾಗಿ ಅಂಗಡಿ ಮುಚ್ಚಿಸುವುದು, ಸಾರಿಗೆ ವಾಹನಗಳ ಮೇಲೆ ಕಲ್ಲು ತೂರಾಟ ಹಾಗೂ ಇತರೆ ಅಹಿತಕರ ಘಟನೆ ನಡೆಸಿದರೆ ಆಯೋಜಕರು ಸೇರಿದಂತೆ ಪ್ರತಿಭಟನಾ ಕಾರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುತ್ತೇವೆ.
ಇನ್ನು ಭದ್ರತೆ ಕುರಿತು ಎಲ್ಲ ಜಿಲ್ಲಾ ಎಸ್ಪಿ, ಐಜಿಪಿ ಮತ್ತು ಪೊಲೀಸ್ ಆಯಕ್ತರಿಗೆ ಸೂಚಿಸಿದ್ದು, ಸಿಎಆರ್, ಡಿಎಆರ್, ಕೆಎಸ್‌ಆರ್‌ಪಿ ತುಕಡಿಗಳು, ಗೃಹ ರಕ್ಷಕ ದಳ, ಅಗ್ನಿಶಾಮಕ ದಳ ಬಳಸಿಕೊಳ್ಳಲು ಸೂಚಿಸಲಾಗಿದೆ. ಹಾಗೆಯೇ ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ಮುಂಜಾನೆಯಿಂದಲೇ ಗಸ್ತು ತಿರಗಬೇಕು ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆಯೋಜಕರೇ ಹೊಣೆ-ಭಾಸ್ಕರ್‌ರಾವ್: ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಮಾಡಲು ಕೆಲವು ಸಂಘಟನೆ ಗಳು ಕರೆ ನೀಡಿವೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದರೆ ಆಯೋಜಕರನ್ನೇ ಹೊಣೆ ಮಾಡಲಾಗುವುದು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಅವಕಾಶವಿಲ್ಲ. ರೈಲ್ವೆ ನಿಲ್ದಾಣದಿಂದ ಸ್ವಾಂತತ್ರ್ಯ ಉದ್ಯಾನ ದವರೆಗೆ ಮಾತ್ರ ಮೆರೆವಣಿಗೆ ಮಾಡಬಹುದು. ಒತ್ತಾಯ ಪೂರ್ವಕವಾಗಿ ಅಂಗಡಿಗಳನ್ನು ಮುಚ್ಚಲು ಅವಕಾಶ ವಿಲ್ಲ. ಆಸ್ತಿ ಹಾನಿ ಸಲ್ಲದು ಎಂದು ಎಚ್ಚರಿಸಿದರು. ಈಗಾಗಲೇ ಹೋರಾಟಗಾರರು ಎರಡು ಬಾರಿ ಉಪಮುಖ್ಯ ಮಂತ್ರಿಗಳನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿಯಿದೆ ಎಂದು ಆಯುಕ್ತ ಭಾಸ್ಕರ್ ರಾವ್ ಹೇಳಿದರು.