Advertisement
ಅಜಾಗರೂಕತೆ ಹಾಗೂ ಸ್ಪರ್ಧಾ ತ್ಮಕವಾದ ವೇಗ ಉಂಟು ಮಾಡುವ ಅನಾಹುತಗಳ ಬಗ್ಗೆ ಮೋಟಾರ್ ವೆಹಿಕಲ್ಸ್ ಇನ್‌ಸ್ಪೆಕ್ಟರ್ ಪ್ರಸಾದ್ ಮಾಹಿತಿ ಒದಗಿಸಿದರು. ಸಾರಿಗೆ ನಿಯಮಗಳು, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್‌ಗಳ ಅಗತ್ಯವನ್ನು ಸರಳವಾಗಿ, ಸುಲಭದಲ್ಲಿ ಮನದಟ್ಟಾಗುವಂತೆ ವಿವರಿಸಿದರು. ಅಂತೆಯೇ ಪೊಲೀಸ್ ಚೆಕ್ಕಿಂಗ್‌ನ ಅಗತ್ಯ ಹಾಗೂ ಚಾಲಕರ ಸಹಕಾರದ ಮಹತ್ವವನ್ನು ವಿವರಿಸಿದರು. ವಾಹನ ಚಲಾವಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ವೇಗ ನಿಯಂತ್ರಣದ ಕುರಿತಾದ ಮಾಹಿತಿಯನ್ನು ನೀಡಿದರು. ಆ ಬಳಿಕ ನಡೆದ ಕಾರ್ಯಕ್ರಮದಲ್ಲಿ ಯುವಜನಾಂಗ ಎದುರಿಸುವ ಸಮಸ್ಯೆಗಳು ಹಾಗೂ ಮಾಧ್ಯಮಗಳ ಸ್ವಾಧೀನತೆಯು ಎಂಬ ವಿಷಯದ ಕುರಿತು ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ಶ್ರೀನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಚುರುಕಿನ ಡಾಗ್ ಸ್ಕ್ವಾಡ್
ಕಾಸರಗೋಡು ಡಾಗ್ ಸ್ಕ್ವಾಡ್ ನ ನಾಲ್ಕು ಪೊಲೀಸ್ ನಾಯಿಗಳ ಉಪ ಸ್ಥಿತಿಯು ಶಿಬಿರಾರ್ಥಿಗಳಿಗೆ ನೂತನ ಅನುಭವ ನೀಡಿತು. ಕೇರಳ ರಾಜ್ಯ ಚಿನ್ನದ ಪದಕ ವಿಜೇತ ಬಸ್ಸಿ, ರೂನಿಗಳೆಂಬ ನಾಯಿಗಳ ಅನ್ವೇಷಣಾ ರೀತಿಗಳು, ಅಪರಾಧಿಗಳನ್ನು ಗುರುತಿಸುವಲ್ಲಿ ತೋರುವ ಜಾಣ್ಮೆ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತು. ನಾಯಿಗಳ ಪೆರೇಡ್ ಕೂಡ ಕುತೂಹಲಕಾರಿಯಾಗಿತ್ತು. ಒಟ್ಟಿನಲ್ಲಿ ಮಾಹಿತಿ ಪೂರ್ಣ ಹಾಗೂ ಸ್ಮರಣೀಯ ಶಿಬಿರವಾಗಿ ಸರ್ಗ ಕಾಹಳಂ-2018 ಮುಂದುವರಿಯುತ್ತಿದೆ.