Advertisement

ಪೊಲೀಸರು ಉತ್ತಮ ಆರೋಗ್ಯ ಬೆಳೆಸಿಕೊಳ್ಳಲಿ

05:22 PM Mar 08, 2021 | Team Udayavani |

ಗದಗ: ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳನ್ನು ನಿಯಂತ್ರಿಸುವುದು, ದುಷ್ಟರ ಶಿಕ್ಷೆ ಹಾಗೂ ಸಜ್ಜನರಿಗೆ ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸುವಲ್ಲಿ ಪೊಲೀಸರ ಪಾತ್ರ ಮಹತ್ವದಾಗಿದೆ. ತಮ್ಮ ಕರ್ತವ್ಯ ನಿರ್ವಹಣೆ ಜೊತೆಗೆ ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪೊಲೀಸ್‌ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್‌ ಸಲಹೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರಸಂಜೆ ನಡೆದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿಮುಖ್ಯತಿಥಿಗಳಾಗಿ ಅವರು ಮಾತನಾಡಿದರು. ಕ್ರೀಡೆಗಳಲ್ಲಿ ಸೋಲು-ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಪ್ರತಿ ನಿತ್ಯ ಕನಿಷ್ಠ ಒಂದು ಗಂಟೆ ಕಾಲ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೈಹಿಕವಾಗಿಯೂ ಆರೋಗ್ಯ ವೃದ್ಧಿಸುತ್ತದೆ. ಸದಾ ಸಮಾಜಕ್ಕಾಗಿಶ್ರಮಿಸುವ ಪೊಲೀಸರು ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ತಮ್ಮ ಕುಟುಂಬದಿಂದ ದೂರ ಉಳಿಯುವಂತಾಗುತ್ತದೆ. ಇದರಿಂದ ಮಾನಸಿಕವಾಗಿ ಆಗಬಹುದಾದ ಒತ್ತಡವನ್ನೂ ಕ್ರೀಡಾ ಚಟುವಟಕೆ ಗಳು ನಿವಾರಿಸುತ್ತವೆ ಎಂದು ಸಲಹೆ ನೀಡಿದರು.

ಯಾವುದೇ ಸಂದರ್ಭದಲ್ಲೂ ಪೊಲೀಸ್‌ ಸಿಬ್ಬಂದಿ ತಾಳ್ಮೆ ಕಳೆದುಕೊಳ್ಳಬಾರದು. ಜನಸಾಮಾನ್ಯರೊಂದಿಗೆ ಸಹನೆಯಿಂದವರ್ತಿಸುವ ಮೂಲಕ ಜನ ಸ್ನೇಹಿ ಪೊಲೀಸ್‌ ಘೋಷಣೆಯನ್ನು ಜನರ ಅನುಭಾವಕ್ಕೆ ಬರುವಂತೆ ಮಾಡಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲಿದ್ದು, ಇಲಾಖೆಯೂ ಜನಪ್ರಿಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯು ಅನುಷ್ಠಾನಕ್ಕೆ ಬಂದಿರುವ ಇಆರ್‌ಎಸ್‌ ಎಸ್‌-112 ಸಹಾಯವಾಣಿ ರಾಜ್ಯದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೊತೆಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೂ ಕಾರಣವಾಗಿದೆ. ಅದರ ಶ್ರೇಯಸ್ಸು ಎಸ್‌ಪಿ ಯತೀಶ್‌ ಸೇರಿದಂತೆ ಪ್ರತಿಯೊಬ್ಬ ಪೇದೆಗೂ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಜಿ.ಪಂ. ಸಿಇಒ ಭರತ್‌ ಎಸ್‌. ಮಾತನಾಡಿ, ಪೊಲೀಸ್‌ ಸಿಬ್ಬಂದಿ ಕ್ರೀಡಾಕೂಟದಲ್ಲಿ ಇಷ್ಟೊಂದು ಆತ್ಮವಿಶ್ವಾಸದೊಂದಿಗೆ ಭಾಗವಹಿಸಿರುವುದು ಸಂತಸ ತಂದಿದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಸೋಲೇ ಮುಂದಿನ ಗೆಲುವಿನ ಮೆಟ್ಟಿಲು ಎಂಬುದನ್ನು ಮನವರಿಕೆ ಮಾಡಿಕೊಂಡು, ಕ್ರೀಡೆ ಮತ್ತು ಕರ್ತವ್ಯದಲ್ಲಿ ಸಮರ್ಥವಾಗಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆ ಮೇಲೆ ಎಸ್ಪಿ ಯತೀಶ್‌ ಎನ್‌. ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next