Advertisement

ರಾಷ್ಟ್ರಪತಿ ಆಗಮನದ ನಡುವೆಯೂ ಆಂಬ್ಯುಲೆನ್ಸ್‌ ಕಳುಹಿಸಿದ ಪೊಲೀಸ್‌

12:36 PM Jun 21, 2017 | Team Udayavani |

ಬೆಂಗಳೂರು: ಗರಿಷ್ಠ ಭದ್ರತೆ ಇರುವ ರಾಷ್ಟ್ರಪತಿ ಅವರು ಆಗಮಿಸುತ್ತಾರೆ ಎಂದರೆ, ಆಗಮನದ ಅರ್ಧ ಗಂಟೆಗೂ ಮೊದಲೇ ವಾಹನ ಸಂಚಾರ ತಡೆಯಲಾಗುತ್ತದೆ. ಪೊಲೀಸ್‌ ಸರ್ಪಗಾವಲು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ರೋಗಿಯ ನ್ನು ಹೊತ್ತ ಅಂಬ್ಯುಲೆನ್ಸ್‌ ಬಂದರೆ, ಹಲವಾರು ಸಂದರ್ಭಗಳಲ್ಲಿ ಶಿಷ್ಟಾಚಾರ, ಕಾನೂನು ಕ್ರಮದ ಕಾರಣಕ್ಕೆ ಅವುಗಳನ್ನೂ ತಡೆದಿದ್ದಿದೆ.

Advertisement

ಆದರೆ ಇತ್ತೀಚೆಗೆ ಬೆಂಗಳೂರಿಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ  ಆಗಮನಕ್ಕೂ ಸ್ವಲ್ಪ ಮೊದಲು ಬಂದ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲಾಗಿದೆ. ಈ ಮೂಲಕ ಅಮೂಲ್ಯ ಜೀವವೊಂದನ್ನು ರಕ್ಷಿಸಲಾಗಿದೆ. ಈ ಕೆಲಸ ಮಾಡಿದ್ದಕ್ಕಾಗಿ ನಗರದ ಇಬ್ಬರು ಸಂಚಾರ ಪೊಲೀಸರಿಗೆ ಶ್ಲಾಘನೆ ವ್ಯಕ್ತವಾಗಿದೆ.  

ಅಷ್ಟೇ ಅಲ್ಲ, ಪೊಲೀಸ್‌ ಇಲಾಖೆ ಅವರನ್ನು ಗೌರವಿಸಿದೆ. ಟ್ರಿನಿಟಿ ಸರ್ಕಲ್‌ನಲ್ಲಿ ಅಲಸೂರು ಠಾಣೆ ಸಂಚಾರ ಎಸ್‌ಐ ಎಂ.ಎಲ್‌. ನಿಜಲಿಂಗಪ್ಪ ಮತ್ತು ಸಹೋದ್ಯೋಗಿ ವಿಶ್ವನಾಥ್‌ ನಿಯೋಜನೆಗೊಂಡಿದ್ದರು. ರಾಷ್ಟ್ರ ಪತಿ ಬೆಂಗಾವಲು ವಾಹನ ಆಗಮನಕ್ಕೂ ಮುನ್ನ ಸಂಚಾರ ತಡೆದಿದ್ದರಿಂದ ಖಾಸಗಿ ಆಸ್ಪತ್ರೆ ಅಂಬ್ಯುಲೆನ್ಸ್‌ ಒಂದು ನಿಂತಿ ದ್ದನ್ನು ಗಮನಿಸಿದ್ದಾರೆ.

ಕೂಡಲೇ ಅಂಬ್ಯುಲೆನ್ಸ್‌ ಹೋಗಲು ಅವರು ದಾರಿ ಮಾಡಿಕೊಟ್ಟಿದ್ದಾರೆ. ಈ ಕೆಲಸವನ್ನು ಬೆಂಗಳೂರು ಟ್ರಾμಕ್‌ ಪೊಲೀಸ್‌ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್‌ ಮಾಡಿದೆ. ಅವರ ಕಾರ್ಯಕ್ಕೆ ಜನರು ಶ್ಲಾ ಸಿದ್ದಾರೆ. ಜೊತೆಗೆ ಪೊಲೀಸರ ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ಅವರು ಗುರುತಿಸಿ ಗೌರವಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next