Advertisement

800 ಗ್ರಾಂ ಗಾಂಜಾ ವಶ: ವಾಹನ ಸಹಿತ ಇಬ್ಬರ ಬಂಧನ

11:01 AM May 25, 2022 | Team Udayavani |

ಹುಬ್ಬಳ್ಳಿ: ನಗರದ ಕಸಬಾಪೇಟೆ ಹಾಗೂ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಪ್ರತ್ಯೇಕವಾಗಿ ಬಂಧಿಸಿ, ಅವರಿಂದ ಅಂದಾಜು 8 ಸಾವಿರ ರೂ. ಮೌಲ್ಯದ 800 ಗ್ರಾಂ ಗಾಂಜಾ, 1 ಸಾವಿರ ರೂ. ನಗದು ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

Advertisement

ಚಟ್ನಿ ಮಠ ಕ್ರಾಸ್‌ ಹತ್ತಿರ ಸಾಗಾಟ ಮಾಡುತ್ತಿದ್ದ ಓರ್ವನನ್ನು ಉಪನಗರ ಪೊಲೀಸರು ಬಂಧಿಸಿ, ಆತನಿಂದ 500ಗ್ರಾಂ ಗಾಂಜಾ, 750 ನಗದು, ಒಂದು ವಾಹನ ವಶಪಡಿಸಿಕೊಂಡಿದ್ದಾರೆ.

ಓರ್ವ ಪರಾರಿಯಾಗಿದ್ದಾನೆ. ಹಳೇಹುಬ್ಬಳ್ಳಿ ಅಕ್ಕಿಪೇಟೆ ಕ್ರಾಸ್‌ ಹತ್ತಿರ ಸಾಗಾಟ ಮಾಡುತ್ತಿದ್ದ ಓರ್ವನನ್ನು ಕಸಬಾಪೇಟೆ ಪೊಲೀಸರು ಬಂಧಿಸಿ, ಆತನಿಂದ 300 ಗ್ರಾಂ ಗಾಂಜಾ, ಒಂದು ವಾಹನ ವಶಪಡಿಸಿಕೊಂಡಿದ್ದಾರೆ. ಉಪನಗರ ಮತ್ತು ಕಸಬಾಪೇಟೆ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿವೆ.

­ಕೊಲೆ ಪ್ರಕರಣ-ಇಬ್ಬರ ಬಂಧನ: ಕ್ಷುಲ್ಲಕ ಕಾರಣಕ್ಕೆ ಸೋಮವಾರ ರಾತ್ರಿ ಹಳೇಹುಬ್ಬಳ್ಳಿ ಆನಂದ ನಗರದಲ್ಲಿ ನಡೆದಿದ್ದ ಓರ್ವನ ಕೊಲೆಗೆ ಸಂಬಂಧಿಸಿ ಹಳೇಹುಬ್ಬಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ವಿಮಲ ಗುಟ್ಕಾ ವಿಚಾರವಾಗಿ ಇಬ್ಬರ ನಡುವೆ ಜಗಳವುಂಟಾದಾಗ ರೌಡಿಶೀಟರ್‌ ಗೌಸಮೋಯಿದ್ದೀನ ತಹಶೀಲ್ದಾರನು ಆನಂದನಗರದ ಮೆಹಬೂಬಸಾಬ ಕಳಸಗೆ ಕೈಗೆ ಸಿಕ್ಕ ವಸ್ತುವಿನಿಂದ ಇರಿದು ಕೊಲೆ ಮಾಡಿದ್ದ.

Advertisement

ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಮಂಗಳವಾರ ಆನಂದನಗರ ಘೋಡಕೆ ಪ್ಲಾಟ್‌ನ ರಿಯಾಜ ಮತ್ತು ದೀಪಕ ಎಂಬುವರನ್ನು ಬಂಧಿಸಿದ್ದು, ಇವರೆಲ್ಲ ಟೈಲ್ಸ್‌ ಕೆಲಸ ಮಾಡಿಕೊಂಡಿದ್ದರು. ಗೌಸಮೋಯಿದ್ದೀನ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

­ರೈಲ್ವೆ ನಿಲ್ದಾಣದಲ್ಲಿ ಬೆಲೆಬಾಳುವ ಮೊಬೈಲ್ಸ್‌ ಕಳವು: ತೆಲಂಗಾಣ ಮೂಲದ ವಿದ್ಯಾರ್ಥಿನಿಯರು ರೈಲು ತಪ್ಪಿಸಿಕೊಂಡು ಇಲ್ಲಿನ ನಿಲ್ದಾಣದ ಜನರಲ್‌ ಟಿಕೆಟ್‌ ಕೌಂಟರ್‌ ಬಳಿ ರವಿವಾರ ತಡರಾತ್ರಿ ಲಗೇಜ್‌ ಇಟ್ಟುಕೊಂಡು ಮಲಗಿದ್ದಾಗ, ಕಳ್ಳರು ಎರಡು ಒನ್‌ಪ್ಲಸ್‌ ನೋರ್ಡ್‌ ಮೊಬೈಲ್‌ಗ‌ಳಿದ್ದ ಹ್ಯಾಂಡ್‌ಬ್ಯಾಗ್‌ ಕಳವು ಮಾಡಿದ್ದಾರೆ.

ತೆಲಂಗಾಣ ನಿರ್ಮಲಾ ಜಿಲ್ಲೆ ಸರನಾಗಾಪುರ ಮಂಡಲದ ಎನ್‌. ಲಕ್ಷ್ಮೀ ತೇರಿಸಾ ಎಂಬುವರು ತಮ್ಮ ಸ್ನೇಹಿತರೊಂದಿಗೆ ಹೈದರಾಬಾದ್‌ಗೆ ತೆರಳೆಂದು ನಿಲ್ದಾಣಕ್ಕೆ ಬಂದಾರ ರೈಲು ಹೊರಟು ಹೋಗಿತ್ತು. ಹೀಗಾಗಿ ನಿಲ್ದಾಣದಲ್ಲಿ ಇವರು ರಾತ್ರಿ ಮಲಗಿಕೊಂಡು ಬೆಳಗ್ಗೆ ಎದ್ದೇಳುವಷ್ಟರಲ್ಲಿ ಕಳ್ಳರು ಒನ್‌ಪ್ಲಸ್‌ನ 43ಸಾವಿರ ರೂ. ಮೌಲ್ಯದ ನೋರ್ಡ್‌-9ಆರ್ಟಿ 5ಜಿಬಿ ಮತ್ತು 34ಸಾವಿರ ರೂ. ಕಿಮ್ಮತ್ತಿನ ನೋರ್ಡ್‌-2, 5ಜಿಬಿ ಮೊಬೈಲ್ಸ್‌ ಹಾಗೂ ಎರಡು ಮೊಬೈಲ್‌ ಚಾರ್ಜ್‌ಗಳು, ಎಟಿಎಂ ಕಾರ್ಡ್ಸ್  ಇದ್ದ ಬ್ಯಾಗ್‌ ಕದ್ದುಕೊಂಡು ಹೋಗಿದ್ದಾರೆ. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ­

550 ಅಡಿ ತಾಮ್ರದ ತಂತಿ ಕಳವು: ಅದರಗುಂಚಿ ಗ್ರಾಮದ ನಂದಿನಿ ವೇರ್‌ ಹೌಸಿಂಗ್‌ ಕಾರ್ಪೊರೇಶನ್‌ ಗೋದಾಮು ಹೊರಗಡೆ ಇರುವ ಬೋರವೆಲ್‌ನ ಅಂದಾಜು 30 ಸಾವಿರ ರೂ. ಮೌಲ್ಯದ ಸುಮಾರು 550 ಅಡಿ ತಾಮ್ರದ ವೈರ್‌ ತಂತಿ ಮಂಗಳವಾರ ಬೆಳಗಿನ ಜಾವ ಕಳ್ಳತನ ಮಾಡಲಾಗಿದೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next