Advertisement

Chandigarh: ಹುಂಜಗಳಿಗೆ ಪೊಲೀಸ್‌ ಭದ್ರತೆ!

09:25 PM Jan 25, 2024 | Team Udayavani |

ಚಂಡೀಗಢ: ಪಂಜಾಬ್‌ನ ಬಟಿಂಡಾ ಜಿಲ್ಲೆಯ ಬುಲ್ಲವಾನಾ ಗ್ರಾಮದಲ್ಲಿ ಆಯೋಜಿಸಿದ್ದ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು, ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ ರಕ್ಷಿಸಿರುವ ಎರಡು ಹುಂಜಗಳಿಗೆ ಪೊಲೀಸರು ಭದ್ರತೆ ನೀಡುತ್ತಿದ್ದಾರೆ.

Advertisement

ಬುಲ್ಲವಾನಾ ಗ್ರಾಮದಲ್ಲಿ ಆಯೋಜಿಸಿದ್ದ ಕೋಳಿ ಅಂಕದಲ್ಲಿ ಸುಮಾರು 200 ಜನರು ಸೇರಿದ್ದರು. ಪೊಲೀಸರು ಅಲ್ಲಿಗೆ ದಾಳಿ ನಡೆಸುತ್ತಿದ್ದಂತೆ ಎಲ್ಲರೂ ಕಾಲ್ಕಿತ್ತರು. ಕೋಳಿ ಅಂಕ ಆಯೋಜಿಸಿದ್ದ ಮೂರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ. ಅಲ್ಲದೇ 11 ಟ್ರೋಫಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಪೊಲೀಸರು ಎರಡು ಹುಂಜಗಳನ್ನು ರಕ್ಷಿಸಿದ್ದು, ಗಾಯಗೊಂಡ ಹುಂಜಕ್ಕೆ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಅವುಗಳಿಗೆ ಆಹಾರ ನೀಡಿ, ದಿನದ 24 ಗಂಟೆ ಕಾವಲು ಕಾಯುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next