ಅಕ್ರಮ ಆಯುಧಗಳ ಬಗ್ಗೆ ಶೋಧ ನಡೆಸಿ ಯಾವುದೇ ರೌಡಿ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ತಪಾಸಣೆ ವೇಳೆ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಪೊಲೀಸ್ ಇಲಾಖೆ ಆಗಾಗ್ಗೆ ಇಂತಹ ತಪಾಸಣೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಇದರಿಂದಾಗಿ ರೌಡಿಗಳ ಮೇಲೆ ನಿರಂತರ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮಂಗಳೂರು ಕಮಿಷನರೆಟ್‌ವ್ಯಾಪ್ತಿಯಲ್ಲೂ ತಪಾಸಣೆಮಂಗಳೂರು ಪೊಲೀಸ್ ಕಮಿಷನ ರೆಟ್ ವ್ಯಾಪ್ತಿಯಲ್ಲಿ ಕಳೆದರಡು ದಿನಗಳಲ್ಲಿ ದಿಢೀರ್‌ಕಾರ್ಯಾಚರಣೆ ನಡೆಸಿ 148 ಮಂದಿ ರೌಡಿಶೀಟರ್, ಹಳೆಯ ಆರೋಪಿಗಳನ್ನು ತಪಾಸಣೆ ಗೊಳಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.