Advertisement

ಪೊಲೀಸರ ಮಾನವೀಯತೆಗೆ ಸಾಯಿಪ್ರಕಾಶ್‌ ಕನ್ನಡಿ

03:50 AM Mar 03, 2017 | Team Udayavani |

ಸಾಯಿಕುಮಾರ್‌ ಅಂದಾಕ್ಷಣ ಥಟ್ಟನೆ ನೆನಪಾಗೋದೇ ಖಡಕ್‌ ಪೊಲೀಸ್‌ ಅಧಿಕಾರಿಯ ಪಾತ್ರ. “ಮಡಮಕ್ಕಿ’ ಚಿತ್ರದ ಬಳಿಕ ಸಾಯಿಕುಮಾರ್‌, “ರಿಯಲ್‌ ಪೊಲೀಸ್‌’ ಚಿತ್ರದಲ್ಲಿ ಪಕ್ಕಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಮಾನವೀಯತೆ
ಜತೆ ಪ್ರಾಮಾಣಿಕ ತೋರುವ ಪೊಲೀಸ್‌ ಅಧಿಕಾರಿ ಪಾತ್ರವಂತೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ನಿರ್ದೇಶನದ 98 ನೇ ಸಿನಿಮಾವಿದು. ಇಲ್ಲಿ ಡ್ರಗ್ಸ್‌ಗೆ ಅಂಟಿಕೊಂಡಿರುವ ವಿದ್ಯಾರ್ಥಿ, ಜಿಹಾದ್‌ ಗೆ ಸೇರಿಸುವ ಕೆಟ್ಟ ಅಪ್ಪ, ಪೊಲೀಸರ ನಡುವಿನ
ಸಂಬಂಧ, ಪೊಲೀಸ್‌ ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಇತ್ಯಾದಿ ಮಿಶ್ರಣವೇ ಸಿನಿಮಾದ ಹೈಲೆಟ್‌. 

Advertisement

ಪೊಲೀಸರಿಗೂ ಮಾನವೀಯತೆ ಇದೆ ಎಂಬುದೇ ಪ್ರಮುಖ ಅಂಶ. ಸಿನಿಮಾ ಇನ್ನೇನು ರಿಲೀಸ್‌ಗೆ ರೆಡಿಯಾಗಿದೆ. ಉಳಿದದ್ದನ್ನೆಲ್ಲಾ “ರಿಯಲ್‌ ಪೊಲೀಸ್‌’ನಲ್ಲಿ ಕಾಣಬಹುದು’ ಎಂದರು ನಿರ್ದೇಶಕರು. ಅಂದು ಮಾಜಿ ಪೊಲೀಸ್‌ ಅಧಿಕಾರಿ ಜ್ಯೋತಿಪ್ರಕಾಶ್‌ಮಿರ್ಜಿ ಅವರನ್ನು ಆಹ್ವಾನಿಸಿತ್ತು ಚಿತ್ರತಂಡ. “ರಿಯಲ್‌ ಪೊಲೀಸ್‌’ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಿರ್ಜಿ, “ಕರ್ನಾಟಕದಲ್ಲಿ ಒಳ್ಳೇಯ ಪೊಲೀಸರಿದ್ದಾರೆ. ಉತ್ತಮ ರೀತಿ ಸೇವೆ ಸಲ್ಲಿಸುತ್ತಿದ್ದಾರೆ. ಸಿನಿಮಾಗಳಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭ್ರಷ್ಟರಂತೆ ಬಿಂಬಿಸಲಾಗುತ್ತದೆ. ಆದರೆ, ರೀಲ್‌ನಲ್ಲಿರುವಂತೆ, ರಿಯಲ್‌ ಆಗಿ ಪೊಲೀಸರು ಇರುವುದಿಲ್ಲ’ ಎಂದರು ಮಿರ್ಜಿ. ನಿರ್ಮಾಪಕ ಸಾಧಿಕ್‌ವುಲ್ಲಾ ಖಾನ್‌ಗೆ “ರಿಯಲ್‌ ಪೊಲೀಸ್‌’ ಎಂಬ ಒಳ್ಳೆಯ ಸಿನಿಮಾ ಮಾಡಿರುವುದು ಖುಷಿಕೊಟ್ಟಿದೆಯಂತೆ. ಇಲ್ಲಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಹೇಗೆಲ್ಲಾ ಇರುತ್ತೆ, ಸಮಾಜದಲ್ಲಿ ಪೊಲೀಸರದು ಎಷ್ಟೊಂದು ಪ್ರಮುಖ ಪಾತ್ರವಿದೆ ಎಂಬುದನ್ನಿಲ್ಲಿ
ತೋರಿಸಲಾಗಿದೆ ಎಂದರು ಅವರು.

ಗಣೇಶ್‌ರಾವ್‌ ಇಲ್ಲಿ ನಾಯಕಿ ತಂದೆಯಾಗಿ ಕಾಣಿಸಿಕೊಂಡಿದ್ದಾರಂತೆ. ಕ್ಯಾಮೆರಾಮೆನ್‌ ಜೆ.ಜಿ.ಕೃಷ್ಣ ಅವರಿಗೆ ಚಿತ್ರೀಕರಣದಲ್ಲಿ
ಸಾಕಷ್ಟು ಹೊಸ ಅನುಭವಗಳಾಗಿವೆಯಂತೆ. ಸಾಯಿಕೃಷ್ಣ ಇದೇ ಮೊದಲ ಸಲ ತಂದೆಯ ನಿರ್ದೇಶನದಲ್ಲಿ ಭಯೋತ್ಪಾದಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಸುಹಾಸ್‌, ಅಕ್ಷಿತಾ ಭೂಪಯ್ಯ, ಆನಂದ್‌, ರಾಜಗೋಪಾಲ್‌, ರಮೇಶ್‌ ಪಂಡಿತ್‌,
ಅರ್ಬಾಜ್‌, ಸಂಗೀತ ನಿರ್ದೇಶಕ ಬಲರಾಂ ಚಿತ್ರದ ಬಗ್ಗೆ ಮಾತಾಡಿದರು. ಮಾರ್ಚ್‌ 10 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಗೋಕುಲ್‌ ರಾಜ್‌ ವಿತರಣೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next