Advertisement

ಒಡಿಶಾದಲ್ಲಿ ಏಳು ಕಳ್ಳರ ಬಂಧನ; 60 ಮೋಟಾರ್‌ ಬೈಕ್‌ ವಶ

05:25 PM Aug 12, 2017 | udayavani editorial |

ಬಾಲಸೋರ್‌, ಒಡಿಶಾ : ಮೋಟಾರ್‌ ಬೈಕ್‌ಗಳನ್ನು ಕಳವು ಮಾಡುವ ಜಾಲವನ್ನು ಭೇದಿಸಿರುವ ಬಾಲಸೋರ್‌ ಪೊಲೀಸರು ಇಂದು ಏಳು ಮಂದಿಯನ್ನು ಬಂಧಿಸಿ ಅವರಿಂದ 60 ಮೋಟಾರ್‌ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಬಾಲಸೋರ್‌ ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ  ಅಳವಡಿಸಲಾಗಿದ್ದ ವಿಶೇಷ ಸಿಸಿಟಿವಿ ಕ್ಯಾಮರಾಗಳ ನೆರವಿನೊಂದಿಗೆ ಬೈಕ್‌ ಕಳ್ಳರನ್ನು ಹಿಡಿಯಲಾಯಿತು ಎಂದು ಬಾಲಸೋರ್‌ ಜಿಲ್ಲಾ ಪೊಲೀಸ್‌ ಸುಪರಿಂಟೆಂಡೆಂಟ್‌ ನೀತಿ ಶೇಖರ್‌ ತಿಳಿಸಿದ್ದಾರೆ. 

ಬೈಕ್‌ ಕಳ್ಳರು ಜನದಟ್ಟನೆಯ ಪ್ರದೇಶಗಳನ್ನು ಕಳವಿಗಾಗಿ ಆಯ್ಕೆ ಮಾಡುತ್ತಿದ್ದರು. ಅವರ ಬಳಿ ಮಾಸ್ಟರ್‌ ಕೀ ಇತ್ತು. ಅದನ್ನು ಬಳಸಿಕೊಂಡು ಅವರು ಬೈಕ್‌ ಕದಿಯುತ್ತಿದ್ದರು. ಕದ್ದ ಬೈಕ್‌ಗಳನ್ನು ಗ್ರಾಮಾಂತರ ಭಾಗಗಳಲ್ಲಿ  ತೀರ ಕಡಿಮೆ ಬೆಲೆಗೆ ಅವರು ಮಾರುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿ ಸಹದೇವ್‌ ಖುಂತಾ ತಿಳಿಸಿದ್ದಾರೆ. 

ಬಂಧಿತ ಬೈಕ್‌ ಕಳ್ಳರು ಬಾಲಸೋರ್‌, ಮಯೂರ್‌ಭಂಜ್‌ ಮತ್ತು ನೆರೆಯ ಪಶ್ಚಿಮ ಬಂಗಾಲಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next