Advertisement

ಭಾರೀ ವೇಶ್ಯಾವಾಟಿಕೆ ಜಾಲ:ಏಕಕಾಲದಲ್ಲಿ 91 ಮಹಿಳೆಯರ ಬಂಧನ!

04:06 PM Mar 23, 2017 | |

ನಾಗ್‌ಪುರ : ನಗರದ ಗಲ್ಲಿಯೊಂದರಲ್ಲಿ ನಡೆಯುತ್ತಿದ್ದ ಭಾರೀ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ ನಡೆಸಿದ ಪೊಲೀಸರು ಏಕಕಾಲಕ್ಕೆ 91 ಮಹಿಳೆಯರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. 

Advertisement

ಭಾರೀ ದಂಧೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಪೊಲೀಸರ ತಂಡ ಭಾರೀ ಕಾರ್ಯಾಚರಣೆಗಿಳಿದು  ವೇಶ್ಯಾವಾಟಿಕೆ ನಿರತ  ಮಹಿಳೆಯರು ಮತ್ತು  45 ಮಂದಿ ಪುರುಷರನ್ನು  ವಶಕ್ಕೆ ಪಡೆದಿದ್ದಾರೆ.  

ವಶಕ್ಕೆ ಪಡೆದಿರುವವರ ಪೈಕಿ 18 ರಿಂದ 60 ವರ್ಷದ ಮಹಿಳೆಯರು ಸೇರಿದ್ದಾರೆ, ಯಾರೊಬ್ಬರು ಅಪ್ರಾಪ್ತ ವಯಸ್ಕರಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.  

ಗಲ್ಲಿ ಗಲ್ಲಿಗಳಲ್ಲಿ ದಾಳಿ ನಡೆಸಲಾಗಿದ್ದು, ಪೊಲೀಸರು ಇಂಚಿಂಚೂ ಶೋಧ ನಡೆಸಿದ್ದಾರೆ. ಈ ವೇಳೆ  6 ಅಡಿ ಆಳದಲ್ಲಿ ಕೋಣೆಗಳನ್ನು ನಿರ್ಮಿಸಿರುವುದು ಪತ್ತೆಯಾಗಿದೆ. 2 ಗುಪ್ತ ಸ್ಥಳದಲ್ಲಿ ಅಡಗಿದ್ದ 10 ಯುವತಿಯರನ್ನು ಕಾರ್ಯಾಚರಣೆಯ ಕೊನೆಯಲ್ಲಿ ಹೊರ ಕರೆತರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next