ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ ರೇವ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 100 ಜನರನ್ನು ಡ್ರಗ್ಸ್ ಸೇವಿಸಿದ ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ. ಬಂಧಿತರಲ್ಲಿ ಪಾರ್ಟಿಯನ್ನು ಸಂಘಟಿಸಿದ ಇಬ್ಬರು ಕೂಡ ಸೇರಿದ್ದಾರೆ.
ಥಾಣೆ ಪೊಲೀಸ್ ನ ಕ್ರೈಂ ಬ್ರಾಂಚ್ ಘಟಕವು ತಡರಾತ್ರಿಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದು, ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆರಂಭವಾಯಿತು ಎಂದು ವರದಿ ಹೇಳಿದೆ.
ಇದನ್ನೂ ಓದಿ:ಪ್ರೀತಿಸುತ್ತಿದ್ದ ಹುಡುಗಿ ಹಿಂದೆ ಬಿದ್ದಿದ್ದವನಿಗೆ ಚಾಕು ಇರಿದಿದ್ದ ಪ್ರೇಮಿ, ಸ್ನೇಹಿತನ ಬಂಧನ
ದಾಳಿಯ ಸಂದರ್ಭದಲ್ಲಿ, ಅಧಿಕಾರಿಗಳು ಪಾರ್ಟಿಯಲ್ಲಿ ಮಾದಕವಸ್ತು ಸೇವನೆಯನ್ನು ಸೂಚಿಸುವ ಎಲ್‌ಎಸ್‌ಡಿ, ಗಾಂಜಾ ಸೇರಿದಂತೆ ವಿವಿಧ ಅಕ್ರಮ ವಸ್ತುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡರು.
ನಡೆಯುತ್ತಿರುವ ತನಿಖೆಯ ಭಾಗವಾಗಿ, ಮಾದಕವಸ್ತು ಸೇವನೆಯ ಆರೋಪಗಳನ್ನು ಖಚಿತಪಡಿಸಲು ಬಂಧಿತ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.