Advertisement

ಶಿವಮೊಗ್ಗ: ಎಸ್‌ಡಿಪಿಐ ಕಚೇರಿಗೆ ಪೊಲೀಸರ ದಾಳಿ

11:51 PM Aug 25, 2022 | Team Udayavani |

ಶಿವಮೊಗ್ಗ: ವೀರ ಸಾವರ್ಕರ್‌ ಫ್ಲೆಕ್ಸ್‌ ತೆರವು ಬೆನ್ನಲ್ಲೇ ಗಾಂ ಧಿ ಬಜಾರ್‌ನಲ್ಲಿ ಪ್ರೇಮ್‌ ಸಿಂಗ್‌ ಎಂಬವರಿಗೆ  ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿ  ಪೊಲೀಸರ ತಂಡವು ಎಸ್‌ಡಿಪಿಐ ಕಚೇರಿ ಸಹಿತ ಹಲವೆಡೆ ಗುರುವಾರ  ದಾಳಿ ನಡೆಸಿದೆ.

Advertisement

ವಿನೋಬನಗರ, ತುಂಗಾನಗರ, ಕುಂಸಿ, ಸಂಚಾರ ಠಾಣೆ ಸಹಿತ ಆರು ಠಾಣೆಗಳ  ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ  ದಾಳಿ ನಡೆಸಲಾಗಿದೆ. ಜತೆಗೆ, ಬೈಪಾಸ್‌ನಲ್ಲಿರುವ ಎಸ್‌ಡಿಪಿಐ ಕಚೇರಿ, ಪ್ರಕರಣದ ಪ್ರಮುಖ ಆರೋಪಿ ಜಬೀ ಅವರ ಅಣ್ಣನ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ.

ಮಾರ್ನಮಿಬೈಲು, ಬುದ್ಧನಗರ ಸಹಿತ ವಿವಿಧೆಡೆ ದಾಳಿ ಮಾಡಲಾಗಿದೆ. ಮೊಬೈಲ್‌, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next