Advertisement

Hunsur: ಇಸ್ಪೀಟ್ ಅಡ್ಡೆಗೆ ದಾಳಿ; 9 ಮಂದಿ ಪ್ರಭಾವಿಗಳ ಬಂಧನ

10:10 AM Aug 28, 2023 | Team Udayavani |

ಹುಣಸೂರು: ನಗರದ ಕೆ.ಎಸ್.ಆರ್.ಟಿ.ಸಿ.ಡಿಪೋ ಬಳಿಯ ಎಸ್.ಎಲ್.ವಿ. ಲಾಡ್ಜ್ ಹಿಂಬಾಗದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ಅಡ್ಡೆಗೆ ದಾಳಿ ಮಾಡಲಾಯಿತು.

Advertisement

ನಗರ ಸೇರಿದಂತೆ ತಾಲೂಕಿನ 9 ಮಂದಿ ಪ್ರಭಾವಿಗಳನ್ನು ಬಂಧಿಸಿ, ಪಣಕ್ಕಿಟ್ಟಿದ್ದ 19,700 ರೂ. ವಶಕ್ಕೆ ಪಡೆದು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಇನ್ಸ್ ಪೆಕ್ಟರ್ ದೇವೇಂದ್ರ, ಎಸ್.ಐ. ಜಮೀರ್ ಅಹಮದ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆಟದಲ್ಲಿ ತೊಡಗಿದ್ದ ಎಲ್ಲ 9 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next