Advertisement

ಜೂಜು ಅಡ್ಡೆ ಮೇಲೆ ಪೊಲೀಸ್‌ ದಾಳಿ: 6 ಮಂದಿ ಬಂಧನ; ನಗದು ವಶಕ್ಕೆ

11:07 AM Jul 23, 2022 | Team Udayavani |

ಕುಣಿಗಲ್: ಜೂಜು ಅಡ್ಡೆ ಮೇಲೆ  ಪೊಲೀಸರು ದಾಳಿ ನಡೆಸಿ ಆರು ಮಂದಿ‌ ಮಂದಿಯನ್ನು ಬಂಧಿಸಿ, ಪಣಕ್ಕೆ ಇಟ್ಟಿದ್ದ14 800 ರೂ ಹಣವನ್ನು ವಶಪಡಿಸಿಕೊಂಡ ಘಟನೆ ಪಟ್ಟಣದ ಮಿಷನ್ ಕಾಂಪೋಡ್ ನಡೆದಿದೆ.

Advertisement

ಪಟ್ಟಣದ ಹೌಸಿಂಗ್ ಬೋರ್ಡ್ ವಾಸಿ  ಮೌಲಾ ಅಲಿ (36),  ಕೋಟೆ ವಾಸಿಗಳಾದ  ಪೈರೋಜ್ (28),  ವಾರಿಸ್ (31) ಶಶಿಕುಮಾರ್ (22) , ನಾಸೀರ್( 38),  ಸೈಪ್ ಉಲ್ಲಾ ಖಾನ್(30)  ಬಂಧಿತ ಆರೋಪಿಗಳು.

ಪಟ್ಟಣದ ಮಿಷನ್ ಕಾಂಪೋಡ್ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಅಂದರ್ ಬಾಯರ್ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ  ಪಿಎಸ್ ಐ ಲಕ್ಷ್ಮಣ್ ನೇತೃತ್ವದ ಪೊಲೀಸರ ತಂಡ  ದಾಳಿ ನಡೆಸಿ, ಆರು ಮಂದಿ ಆರೋಪಿಗಳನ್ನು  ಬಂಧಿಸಿ, ಪಣಕ್ಕೆ ಇಟ್ಟಿದ 14,800  ರೂ. ನಗದು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮಂಗಳೂರು: ಹಳಿ ತಪ್ಪಿದ ಗೂಡ್ಸ್ ರೈಲು

ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next