ಬೆಳಗಾವಿ: ಹೊರ ದೇಶಗಳಲ್ಲಿ ನೌಕರಿ ಕೊಡಿಸುವದಾಗಿ ಪ್ರಚಾರ ಮಾಡಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಾರ್ಕೆಟ್ ಠಾಣೆ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಒಬ್ಬನನ್ನು ಬಂಧಿಸಿ ಲಕ್ಷ ರೂ. ನಗದು ಹಣ, ಲ್ಯಾಪ್ ಟಾಪ್, ಪಾಸ್ ಪೋರ್ಟ್ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿಯ ಶಾಹುನಗರದ ಇಮ್ತಿಯಾಜ್ ಅಸ್ತುಪಟೇಲ ಯರಗಟ್ಟಿ(40) ಎಂಬಾತನನ್ನು ಬಂಧಿಸಲಾಗಿದೆ. ಉಡುಪಿಯ ಕುಂದಾಪುರದ ಉಮರಫಾರುಖ್ ಅಬ್ದುಲ ಹಮೀದ್ (37) ಎಂಬಾತ ಪರಾರಿಯಾಗಿದ್ದಾನೆ.
ದರ್ಬಾರ್ ಗಲ್ಲಿಯಲ್ಲಿಯ ಟ್ರಾವೆಲ್ ವರ್ಲ್ಡ್ ಜಾಬ್ ಕನ್ಸಲ್ಟಂಟ್ಸ್ ಲೋಕಲ್ ಮತ್ತು ಇಂಟರ್ ನ್ಯಾಶನಲ್ ಎಂಬ ಸಂಸ್ಥೆಯನ್ನು ಇಮ್ತಿಯಾಜ್ ನಡೆಸುತ್ತಿದ್ದನು. ಹೊರ ದೇಶಗಳಲ್ಲಿ ನೌಕರಿ ಕೊಡಿಸುವುದಾಗಿ ಯುವಕ-ಯುವತಿಯರಿಗೆ ಆಮಿಷ ಒಡ್ಡುತ್ತಿದ್ದ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ದಾಳಿ ನಡೆಸಿದರು. 1.14 ಲಕ್ಷ ರೂ. ನಗದು ಹಣ, ಮೂರು ಕಂಪ್ಯೂಟರ್, ಲ್ಯಾಪ್‌ಟಾಪ್, 314 ಪಾಸ್ ಪೋರ್ಟ್ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರತಿಭಟನಾ ನಿರತ ರೈತರಿಗೆ ‘ಮದ್ಯ’ ಕೊಡಿ ಎಂದ ಕಾಂಗ್ರೆಸ್ ನಾಯಕಿ….ಟಿಕಾಯತ್ ತಿರುಗೇಟು
ಶೆಟ್ಟಿ ಗಲ್ಲಿಯಲ್ಲಿಯ ಸ್ಟ್ಯಾಂಡರ್ಡ್ ಗ್ರೂಪ್ ಆಫ್ ಎಂಟರ್ಪ್ರೈಸಸ್ ಎಂಬ ಅಂಗಡಿ ಮೇಲೆ ದಾಳಿ ನಡೆಸಿದಾಗ ಉಮರ್ ಫಾರುಖ ಪರಾರಿಯಾಗಿದ್ದಾನೆ. ಎರಡು ಕಂಪ್ಯೂಟರ್, ಎರಡು ಮೊಬೈಲ್, ಐಡಿ ಕಾರ್ಡ್ , ಅಪ್ಲಿಕೇಶನ್ ಫಾರ್ಮ್ಸ್, ಪಾಸ್ ಪೊರ್ಟ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.