ವಿಟ್ಲ: ವಿಟ್ಲ ಪೇಟೆಯಲ್ಲಿ ಅಂಗಡಿಯ ಬಾಗಿಲು ಹಾಕಿ ಬಟ್ಟೆ ವ್ಯಾಪಾರ ನಡೆಸುತ್ತಿರುವ ಮಾಹಿತಿ ವಿಟ್ಲ ಪೊಲೀಸರು ದಾಳಿ ಮಾಡಿ, ಅಂಗಡಿ ಮುಚ್ಚಿಸಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಮಹಿಳೆಯರು, ಪುರುಷರು ಅನೇಕ ಮಂದಿ ಭರದಿಂದ ಬಟ್ಟೆ ಖರೀದಿಸುತ್ತಿದ್ದರು. ಪೊಲೀಸರು ಅಂಗಡಿ ಮಾಲಕನಿಗೆ ಬಾಗಿಲು ತೆರೆಯಲು ಹೇಳಿ, ಎಲ್ಲರನ್ನೂ ಹೊರಗೆ ಕಳುಹಿಸಿದರು.
ಇದನ್ನೂಓದಿ:ಸಿಗಂದೂರು ಆಡಳಿತ ಮಂಡಳಿಯಿಂದ ನ್ಯಾಯಾಲಯದ ಆದೇಶ ಪಾಲನೆ : ಒತ್ತುವರಿ ಜಾಗ ತೆರವು
ಕೆಲದಿನಗಳ ಹಿಂದೆ ಈ ಘಟನೆ ಸಂಭವಿಸಿದ್ದು, ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ರವಿವಾರ ವೈರಲ್ ಆಗಿದೆ. ಮಾಲಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿದುಬಂದಿದೆ. ಇಂತಹ ಸಂದರ್ಭದಲ್ಲಿಯೂ ಈ ಘಟನೆ ನಡೆದ ಬಗ್ಗೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂಓದಿ: ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ ಎಂದು ಸೋಂಕಿತರ ಅಳಲು! ವಿಡಿಯೋ ವೈರಲ್