Advertisement

ಎರಡು ಕಡೆ ದಾಳಿ: 15.67 ಲಕ್ಷ ರೂ. ಮೌಲ್ಯದ ಅಕ್ಕಿ ವಶ

12:05 PM Dec 13, 2021 | keerthan |

ವಿಜಯಪುರ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಜಂಟಿ ದಾಳಿ ನಡೆಸಿ, 15.67 ಲಕ್ಷ ರೂ. ಮೌಲ್ಯದ ಸರ್ಕಾರದ ವಿವಿಧ ಯೋಜನೆಗಳಿಗೆ ನೀಡುವ 578 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನಗರದ ಕನ್ನನ್ ನಗರದ ಶೆಡ್ ನಲ್ಲಿ ಸಂಗ್ರಹಿಸಿದ್ದ 500 ಕ್ವಿಂಟಾಲ್ ಹಾಗೂ ಮುರಾನಕೇರಿ ಪ್ರದೇಶದಲ್ಲಿ ಕ್ಯಾಂಟರ್ ನಲ್ಲಿ ಸಾಗಾಟ ಮಾಡುತ್ತಿದ್ದ 76 ಕ್ವಿಂಟಾಲ್ ಅಕ್ಕಿ ಹಾಗೂ ಕೆಎ 28 ಡಿ4382 ಸಂಖ್ಯೆಯ ಕ್ಯಾಂಟರ್ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಭಾನುವಾರ ತಡರಾತ್ರಿ ದಾಳಿ ಮಾಡಿದ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಕ್ಕಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next