Advertisement

ಕೋವಿಡ್ ಯೋಧರಿಗೆ ಉಚಿತ ಪೆಟ್ರೋಲ್: ಅಂತರ ಕಾಪಾಡದೆ ಮುಗಿಬಿದ್ದ ವೈದ್ಯಕೀಯ, ಪೊಲೀಸ್ ಸಿಬ್ಬಂದಿ

09:24 AM Apr 13, 2020 | keerthan |

ಶಿವಮೊಗ್ಗ: ಇಲ್ಲಿನ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ಕೋವಿಡ್-19 ಸೋಂಕು ವಿರುದ್ಧ ಹೋರಾಡುವ ಯೋಧರಿಗೆ ಒಂದು ಲೀಟರ್ ಉಚಿತ ಪೆಟ್ರೋಲ್ ನೀಡುವುದಾಗಿ ಘೋಷಿಸಿದ್ದಾರೆ. ಉಚಿತ ಪೆಟ್ರೋಲ್ ಗಾಗಿ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿ ಪೆಟ್ರೋಲ್ ಬಂಕ್ ನಲ್ಲಿ ಮುಗಿದಿದ್ದ ಪ್ರಸಂಗ ನಡೆಯಿತು. ವಿಪರ್ಯಾಸವೆಂದರೆ ಉಚಿತ ಪೆಟ್ರೋಲ್ ಪಡೆಯುವ ಭರದಲ್ಲಿ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಗಳೇ ಸಾಮಾಜಿಕ ಅಂತರ ಕಾಪಾಡಲು ಮರೆತರು!

Advertisement

ಇಲ್ಲಿನ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ ನಲ್ಲಿ ಒಂದು ಲೀಟರ್ ಉಚಿತ ಪೆಟ್ರೋಲ್ ನೀಡಲಾಗುತ್ತಿದೆ. ಸೋಂಕು ಹರಡದಂತೆ ತಡೆಗಟ್ಟುತ್ತಿದ್ದಾರೆ ಎಂಬ ಕಾರಣಕ್ಕೆ ಬಂಕ್ ಮಾಲೀಕರು ಕೋವಿಡ್ ವಾರಿಯರ್ಸ್ ಗೆ ಒಂದು ಲೀಟರ್ ಉಚಿತ ಪೆಟ್ರೋಲ್ ನೀಡುತ್ತಿದ್ದಾರೆ.

ಆದರೆ ಉಚಿತವಾಗಿ ದೊರೆಯುವ ಕಾರಣ ಆದಷ್ಟು ಬೇಗ ಪೆಟ್ರೋಲ್ ಪಡೆಯುವ ಭರದಲ್ಲಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ನಿಯಮಗಳನ್ನು ಗಾಳಿಗೆ ತೂರಿರುವುದು ಸಾರ್ವಜನಿಕರ ಟೀಕೆಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next