Advertisement
ರಾಜ್ಯ ಸರಕಾರ ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೊಳಿಸಿ ಪೊಲೀಸರ ಎಲ್ಲ ಬೇಡಿಕೆಗಳನ್ನು ಈಡೇರಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಪೊಲೀಸರು ತಮ್ಮ ಬೇಡಿಕೆಗಳಿಗಾಗಿ ರಾಜ್ಯ ಸರಕಾರದ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ ಹಾಗೂ ಬೇಡಿಕೆಗಳನ್ನು ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 25 ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಮಾರು 95 ಸಾವಿರ ಪೊಲೀಸರ ಸಹಿ ಇದೆ ಎಂದು ಹೇಳಿಕೊಳ್ಳುವ “ಪೊಲೀಸರ ಹೆಸರಿನ’ ಪತ್ರದ ಮೂಲಕ ಕಳುಹಿಸಿಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಧಾನವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಅವಕಾಶವಿಲ್ಲದ ಕಾರಣ ಪೊಲೀಸರು ಮುಖ್ಯಮಂತ್ರಿಗೆ ಪತ್ರದ ಮೂಲಕ ಬೇಡಿಕೆ ಜತೆಗೆ ತಮಗಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ ಎಂದು
ಹೇಳಲಾಗಿದೆ. ಪೊಲೀಸರು ಬರೆದ ಪತ್ರದಲ್ಲಿ ಸಿಎಂ ಸುಮಾರು 40-45 ನಿಮಿಷಗಳ ಕಾಲ ಸಮಾಧಾನದಿಂದ ತಾವೇ ಖುದ್ದಾಗಿ ಓದಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Related Articles
ಪ್ರಮುಖವಾಗಿ ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿಯನ್ನು ಸಂಪೂರ್ಣ ಜಾರಿಗೊಳಿಸಲು ಕನಿಷ್ಠ 5 ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Advertisement
ಔರಾದ್ಕರ್ ವರದಿಯಲ್ಲಿ ಎಎಸ್‌ಐ, ಎಚ್‌ಸಿ, ಪಿಸಿ ಸಹಿತ ಕೆಳ ಹಂತದ ಪೊಲೀಸ್ ಸಿಬಂದಿ ಮೂಲ ವೇತನದಲ್ಲಿ ಶೇ. 30ರಿಂದ 35ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಶಿಫಾರಸು ಮಾಡಲಾಗಿತ್ತು. ಅದರಂತೆ ನಡೆದುಕೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಬೇಡಿಕೆಗಳು ಏನು?– ಪೊಲೀಸ್ ಕಾನ್‌ಸ್ಟೆàಬಲ್ ಮತ್ತು ಹೆಡ್ ಕಾನ್‌ಸ್ಟೆàಬಲ್ (ಎಚ್‌ಸಿ)ಗಳಿಗೆ ವಾರದ ರಜೆಯ ಬದಲು 200 ರೂ. ನೀಡುವ ಭತ್ತೆ ವ್ಯವಸ್ಥೆಯನ್ನು ಶಾಶ್ವತವಾಗಿ ರದ್ದುಗೊಳಿಸಿ, ಆಂಧ್ರ ಪ್ರದೇಶ ಮಾದರಿಯಲ್ಲಿ ಕಡ್ಡಾಯ ವಾರದ ರಜೆ ನೀಡುವ ನಿರ್ಧಾರ ಪ್ರಕಟಿಸಬೇಕು. – ಕಾನ್‌ಸ್ಟೆàಬಲ್‌ನಿಂದ ಪಿಎಸ್‌ಐವರೆಗೂ ನೀಡುವ ವಿಶೇಷ ಕಿಟ್ ಭತ್ತೆಯನ್ನು 40 ರೂ. ಗಳಿಂದ 500 ರೂ.ಗೆ ಏರಿಸಬೇಕು. ಸಾರಿಗೆ ಭತ್ತೆಯನ್ನು 600 ರೂ.ಗಳಿಂದ 2 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. – 2ನೇ ಹಾಗೂ 4ನೇ ಶನಿವಾರ ಪೊಲೀಸರಿಗೆ ಯಾವುದೇ ರಜೆ ದೊರೆಯದಿರುವುದರಿಂದ ವಾರ್ಷಿಕ ಒಂದು ತಿಂಗಳ ಹೆಚ್ಚುವರಿ ವೇತನ ನೀಡಬೇಕು. ಪೊಲೀಸರಿಗೆ ರಜೆ ನೀಡುವ ವ್ಯವಸ್ಥೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾದರಿಯಲ್ಲಿ ತಂತ್ರಾಂಶ ಮೂಲಕ ಜಾರಿಗೊಳಿಸಬೇಕು. – ಪೊಲೀಸರಿಗೆ ನೀಡುವ ವಾರದ ರಜೆ ಭತ್ತೆ, ಸಮವಸ್ತ್ರ, ಉಚಿತ ಪಡಿತರ ಬದಲಿ ನೀಡುವ ಭತ್ತೆ, ವಿಶೇಷ ಕಿಟ್, ವೈದ್ಯಕೀಯ ಭತ್ತೆಗಳು ಪ್ರತಿ ಎರಡು ವರ್ಷಕ್ಕೊಮ್ಮೆ ನಿಯಮಿತವಾಗಿ ಹೆಚ್ಚಳವಾಗುವಂತೆ ಸೂಕ್ತ ನಿಯಮಗಳನ್ನು ರೂಪಿಸಬೇಕು. – ಪೊಲೀಸ್ ಸಿಬಂದಿ ಹಾಗೂ ಅವರ ಕುಟುಂಬದವರಿಗೆ ವರ್ಷದಲ್ಲಿ ಒಂದು ತಿಂಗಳು ರೈಲು ಹಾಗೂ ಬಸ್‌ನಲ್ಲಿ ಉಚಿತ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು. – ಪೊಲೀಸ್ ಸಿಬಂದಿಗೆ ಉಚಿತ್ ಬಸ್ ಪಾಸ್ ವ್ಯವಸ್ಥೆ ಮಾಡಬೇಕು. ಪೊಲೀಸ್ ಸಿಬಂದಿ ದಿನಕ್ಕೆ 8 ಗಂಟೆ ಮಾತ್ರ ಕೆಲಸ ಮಾಡಲು ಸೂಕ್ತ ನಿಯಮಗಳನ್ನು ರೂಪಿಸಿ, 8 ಗಂಟೆಗಳಿಗಿಂತಲೂ ಹೆಚ್ಚಿನ ಅವಧಿ ಕೆಲಸ ಮಾಡಿದರೆ, ಪ್ರತಿ ಗಂಟೆಗೂ ಕನಿಷ್ಠ 500 ರೂ. ಭತ್ತೆಯನ್ನು ನೀಡುವಂತೆ ಆರ್ಥಿಕ ಇಲಾಖೆಯಿಂದ ಸೂಕ್ತ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು. - ಶಂಕರ ಪಾಗೋಜಿ