ಉಳ್ಳಾಲ, ಜ. 23: ಮುಡಿಪು ಜಂಕ್ಷನ್‌ನಲ್ಲಿರುವ ಮೆಡಿಕಲ್ ಸ್ಟೋರ್ ಎದುರುಗಡೆ ಒಂದೇ ಜಾಗದಲ್ಲಿ ಪಾರ್ಕ್ ಮಾಡಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ನೋ ಪಾರ್ಕಿಂಗ್ ನಿಯಮದಂತೆ ತಿಂಗಳ ಅಂತರದಲ್ಲಿ 16 ನೋಟಿಸ್ ನೀಡಿ ಸಾವಿರಾರು ರೂ. ದಂಡ ವಿಧಿಸಿದ್ದಾರೆ.
ಇದನ್ನೂ ಓದಿ:ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ
ಪೊಲೀಸರು ಕಳುಹಿಸಿದ್ದ ಎಲ್ಲ ನೋಟಿಸ್‌ಗಳನ್ನು ಮೆಡಿಕಲ್ ಸ್ಟೋರ್ ಮಾಲಕಿ ಸ್ಟೋರ್ ಎದುರು ಸಾರ್ವಜನಿಕ ಪ್ರದರ್ಶನಕ್ಕಿಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋಟಿಸ್ ನಲ್ಲಿ ಒಂದೇ ಸಮಯ ನಮೂದಾಗಿದ್ದು, ದಿನಾಂಕ ಮಾತ್ರ ಬೇರೆ ಬೇರೆಯಾಗಿದೆ. ಪೊಲೀಸರು ಉದ್ದೇಶ ಪೂರ್ವಕವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ನೋಟಿಸ್ ನೀಡುತ್ತಿದ್ದಾರೆ ಎಂದು ಮೆಡಿಕಲ್ ಮಾಲಕಿ ಶ್ರೀಮತಿ ಆರೋಪಿಸಿದ್ದಾರೆ.
5 ಸಾವಿರ ರೂ. ದಂಡ ಕಟ್ಟಿ ಎಂದರು!
ಮುಡಿಪುವಿನಲ್ಲಿ ಕಳೆದ ವರ್ಷ ದಲ್ಲಿ ತಡೆದಿದ್ದ ಟ್ರಾಫಿಕ್ ಪೊಲೀಸರು ನಿಮ್ಮ ಸ್ಕೂಟರ್ ವಿರುದ್ಧ 5,000 ರೂ. ದಂಡ ಇದೆ ಕಟ್ಟಿ ಎಂದಿದ್ದರು. ಶ್ರೀಮತಿ ಅವರು ತನಗೇಕೆ ದಂಡ ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರವನ್ನು ಟ್ರಾಫಿಕ್ ಪೊಲೀಸರು ಪ್ರಸ್ತಾವಿಸಿದ್ದಾರೆ. ತನಗೆ ಅದರ ಬಗ್ಗೆ ಗೊತ್ತಿಲ್ಲ. ಕೇಸ್ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಶ್ರೀಮತಿ ಅವರು ಪೊಲೀಸರಲ್ಲಿ ಹೇಳಿದ್ದಾರೆ.ಬಳಿಕ ಅವರಿಗೆ ತಿಂಗಳಿಗೆ 500 ರೂ. ಮತ್ತು 1,000 ರೂ. ದಂಡ ಪ್ರಯೋಗದ ಎರಡು ನೋಟಿಸ್‌ಗಳು ಬರಲಾರಂಭಿಸಿದ್ದು, ಈವರೆಗೆ ಒಟ್ಟು 16 ನೋಟಿಸ್‌ಗಳು ಬಂದಿವೆ.
ದೂರು ಕೊಟ್ಟರೆ ತನಿಖೆ ಒಂದೇ ದಿನ ಎರಡು ದಂಡ ಬಿದ್ದಿರುವ ಕುರಿತು ಮಾಹಿತಿ ನೀಡಿ ಸಂಬಂಧಪಟ್ಟ ವಾಹನ ಮಾಲಕರು ಠಾಣೆಗೆ ಆಗಮಿಸಿ ವಿಚಾರಿಸಬೇಕಿತ್ತು. ಒಂದೇ ದಿನ ಎರಡು ನೋಟಿಸ್ ಜಾರಿಯಾಗಿದ್ದರೆ ಹೆಚ್ಚುವರಿ ನೋಟಿಸ್ ರದ್ದು ಮಾಡಲಾಗುತ್ತದೆ. ವಾಹನ ಮಾಲಕಿ ಠಾಣೆಗೆ ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ನಾಗುರಿ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.