Advertisement

ಬ್ರಿಟನ್‌ ಅಪರಾಧ ನಿಯಂತ್ರಣಕ್ಕೆ ಮಹೀಂದ್ರಾ ಅಟೋ ಬಳಕೆ

06:47 PM Oct 18, 2022 | Team Udayavani |

ಲಂಡನ್‌: ಸಾಮಾನ್ಯವಾಗಿ ಕಳ್ಳರು, ದರೋಡೆಕಾರರನ್ನು ಹಿಡಿಯಲು ವಿಶ್ವದ ವಿವಿಧ ಭಾಗದ ಪೊಲೀಸರು ಹೈ-ಸ್ಪೀಡ್‌ ಅತ್ಯಾಧುನಿಕ ವಾಹನಗಳನ್ನು ಬಳಸುವುದು ವಾಡಿಕೆ. ಆದರೆ ಬ್ರಿಟನ್‌ ಪೊಲೀಸರು ಅಪರಾಧ ನಿಯಂತ್ರಣಕ್ಕೆ ಮಹೀಂದ್ರ ಎಲೆಕ್ಟ್ರಿಕ್‌ ಆಟೋಗಳನ್ನು ಬಳಸಲು ಮುಂದಾಗಿದ್ದಾರೆ.

Advertisement

ಈಗಾಗಲೇ ಬ್ರಿಟನ್‌ನ ಗ್ವೆಂಟ್‌ ಪೊಲೀಸರು ನಾಲ್ಕು ಎಲೆಕ್ಟ್ರಿಕ್‌ ಆಟೋಗಳನ್ನು ಅಪರಾಧ ನಿಗ್ರಹದ ನಿಟ್ಟಿನಲ್ಲಿ ಬಳಸುತ್ತಿದ್ದಾರೆ.

“ಅಬರ್ಗವೆನ್ನಿ ಮತ್ತು ನ್ಯೂಪೋರ್ಟ್‌ನ ಉದ್ಯಾನಗಳು, ಪ್ರಮುಖ ನಡಿಗೆ ಪಥಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಸಮಯದ ಗಸ್ತಿಗಾಗಿ ಎಲೆಕ್ಟ್ರಿಕ್‌ ಆಟೋಗಳನ್ನು ಬಳಸಲಾಗುತ್ತಿದೆ,’ ಎಂದು ಬ್ರಿಟನ್‌ನ ದಕ್ಷಿಣ ವೇಲ್ಸ್‌ ಪೊಲೀಸರು ಮಾಹಿತಿ ನೀಡಿದ್ದಾರೆ.


ಈ ಕುರಿತು ಟ್ವೀಟ್‌ ಮಾಡಿರುವ ಮಹೀಂದ್ರ ಎಲೆಕ್ಟ್ರಿಕ್‌, “ಭಾರತದಲ್ಲಿ ಪ್ರಯಾಣಿಕರ ಸಂಚಾರಕ್ಕಾಗಿ ದೊಡ್ಡ ಮಟ್ಟದಲ್ಲಿ ಆಟೋಗಳನ್ನು ಬಳಸಲಾಗುತ್ತಿದೆ. ಆದರೆ ಬ್ರಿಟನ್‌ನ ಗ್ವೆಂಟ್‌ ಪೊಲೀಸರು ಅಪರಾಧ ನಿಯಂತ್ರಣದ ನಿಟ್ಟಿನಲ್ಲಿ ಗಸ್ತು ತಿರುಗಲು ಮಹೀಂದ್ರ ಎಲೆಕ್ಟ್ರಿಕ್‌ ಆಟೋಗಳನ್ನು ಬಳಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ,’ ಎಂದು ಹೇಳಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next