ಹೋಂಗಾರ್ಡ್ಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ| ಎಂ.ಎ. ಸಲೀಂ
ಬಣ್ಣಿಸಿದರು.
Advertisement
ಭಾನುವಾರ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಅಖೀಲ ಭಾರತ ಗೃಹರಕ್ಷಕ ದಳ ದಿನಾಚರಣೆಯಲ್ಲಿ ಮಾತನಾಡಿದಅವರು, ದಾವಣಗೆರೆ ಜಿಲ್ಲೆಯಲ್ಲಿ 2002 ರಿಂದ ಗೃಹರಕ್ಷಕದಳ ಸಿಬ್ಬಂದಿ ಕಾನೂನು, ಸುವ್ಯವಸ್ಥೆ, ಸಂಚಾರ ನಿಯಂತ್ರಣ, ಚುನಾವಣೆ
ಒಳಗೊಂಡಂತೆ ಇತರೆ ಅಗತ್ಯ ಸಂದರ್ಭದಲ್ಲಿ ಒಳ್ಳೆಯ ರೀತಿ ಪೊಲೀಸ್ ಇಲಾಖೆಗೆ ಭುಜಕ್ಕೆ ಭುಜ ನೀಡಿ ಕೆಲಸ ಮಾಡುತ್ತಿದೆ ಎಂದರು. ಪೊಲೀಸ್ ಇಲಾಖೆಯ ಕೆಲಸ ಎಂದರೆ ಕಷ್ಟ. ಸಮಯದ ಮಿತಿ ಇಲ್ಲದೆ ಕೆಲಸ ಮಾಡುವ ಸಂದರ್ಭದಲ್ಲಿ ಗೃಹರಕ್ಷಕ ದಳದಿಂದ ಸ್ವಲ್ಪ ನೆರವು ದೊರೆಯುತ್ತದೆ. 2017ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕಾನೂನು, ಸುವ್ಯವಸ್ಥೆಯ ಸಮಸ್ಯೆಯೇ ಆಗಲಿಲ್ಲ. ಗೃಹರಕ್ಷಕದಳದ ಸಿಬ್ಬಂದಿಯ ನೆರವು ಸಹ ಕಾರಣ. 2018ರ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ಚುನಾವಣೆ ಬರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಬಂದೋಬಸ್ತ್ ಕೆಲಸ ನಡೆಯುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಗೃಹರಕ್ಷಕದಳದ ಸಿಬ್ಬಂದಿ
ಇನ್ನೂ ಹೆಚ್ಚಿನ ಶ್ರಮದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸೂಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಎಸ್. ಉದ್ದೇಶ್ ಮಾತನಾಡಿ, ಮುಂಬೈನಲ್ಲಿ ಕೋಮುಗಲಭೆ ನಡೆದ ಸಂದರ್ಭದಲ್ಲಿ
ಪ್ರಾರಂಭವಾದ ಗೃಹರಕ್ಷಕದಳದ ಸಿಬ್ಬಂದಿ ಅಂದಿನಿಂದಲೂ ಪೊಲೀಸ್ ಇಲಾಖೆಯಿಂದ ಉತ್ತಮ ಕೆಲಸ ಮಾಡುತ್ತಿದೆ. ವೃತ್ತಿ ಮತ್ತು
ವೈಯಕ್ತಿಕ ಜೀವನದಲ್ಲಿ ಶಿಸ್ತು ಪಾಲಿಸುವ ಮೂಲಕ ಒಳ್ಳೆಯ ಕೆಲಸ ಮಾಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಾದೇಷ್ಟ ಡಾ| ಬಿ.ಎಚ್. ವೀರಪ್ಪ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಖಾಲಿ ಇರುವ 220 ಗೃಹರಕ್ಷಕ
ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಹರಿಹರ ತಾಲೂಕಿನ ದೇವರಬೆಳಕೆರೆಯಲ್ಲಿ 6.5 ರಿಂದ 7 ಕೋಟಿ
ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜ್ಯದ ಮೊಟ್ಟ ಮೊದಲ ಪ್ರಾದೇಶಿಕ ತರಬೇತಿ ಕೇಂದ್ರ ನಿಷ್ಕಿಯವಾಗದಂತೆ ಹಿರಿಯ ಅಧಿಕಾರಿಗಳು
ಗಮನ ನೀಡಬೇಕು ಎಂದು ಮನವಿ ಮಾಡಿದರು. ದೇವರಾಜ್, ನಿರ್ಮಲಾ ನಿರೂಪಿಸಿದರು.