Advertisement

ನಿರಾಶ್ರಿತರ ನೆರವಿಗೆ ಧಾವಿಸಿದ ಪೊಲೀಸರು

10:53 AM Mar 30, 2020 | Suhan S |

ಬೆಂಗಳೂರು: ಕೋವಿಡ್ 19 ವೈರಸ್‌ ಹರಡುವಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ನಗರ ಪೊಲೀಸರು ಕಾನೂನು ಸುವ್ಯವಸ್ಥೆ ಜತೆಗೆ ನಿರಾಶ್ರಿತರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದರು.

Advertisement

ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪ ವಿಭಾಗದ ಕುಮಾರಸ್ವಾಮಿ ಲೇಔಟ್‌, ಸುಬ್ರಹ್ಮಣ್ಯಪುರ. ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿರಾಶ್ರಿತರ ಕೇಂದ್ರ ಕುಮಾರಸ್ವಾಮಿ ಲೇಔಟ್‌ ಠಾಣೆ ವ್ಯಾಪ್ತಿಯ ಕೆಲವೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆದಿದ್ದು, ಉತ್ತರ ಕರ್ನಾಟಕ, ಉತ್ತರ ಭಾರತದಿಂದ ಬಂದಿರುವ ಕೂಲಿ ಕಾರ್ಮಿಕರು ಹಾಗೂ ಭಿಕ್ಷುಕರು, ನಿರಾಶ್ರಿತರಿಗಾಗಿ ಕೇಂದ್ರ ತೆರೆಯಲಾಗಿದ್ದು, ಮೂರು ಹೊತ್ತು ಅನ್ನ ಸಂತರ್ಪಣೆ ನಡೆಯಲಿದೆ. ಜತೆಗೆ ಸೂರು ಇಲ್ಲದವರು ಮುಂಗಡವಾಗಿ ಕೋರಿದರೆ, ಮಲಗಲು ವ್ಯವಸ್ಥೆ ಮಾಡಲಾಗಿದೆ. ನಿತ್ಯ 100-150 ಮಂದಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಠಾಣಾಧಿಕಾರಿ ಮಾಹಿತಿ ನೀಡಿದರು.

ಪಡಿತರ ಭಾಗ್ಯ: ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿರುವ ಉತ್ತರಹಳ್ಳಿ, ಮಾರುತಿನಗರ, ಶ್ರೀನಿವಾಸನಗರ ಸೇರಿ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರ ಮನೆಗಳಿಗೆ 10-12 ದಿನಕ್ಕೆ ಆಗುವಷ್ಟು ಪಡಿತರ ವಿತರಿಸಿದರು. ಠಾಣೆಯ ಪಿಎಸ್‌ಐ ಮಧು, ವಜ್ರಮುನಿ, ಆಶಾ, ಅಕ್ಷತಾ ಮತ್ತು ತಂಡ ಇದುವರೆಗೂ ಸುಮಾರು 150 ಮನೆಗಳಿಗೆ ಪಡಿತರ ವಿತರಿಸಿದೆ. ತಲ್ಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು, ಮರದ ಕೆಳಗೆ, ನಿಲ್ದಾಣ ಮತ್ತಿತರ ಕಡೆ ಕುಳಿತಿದ್ದ ನಿರಾಶ್ರಿತರಿಗೆ ಹೊಯ್ಸಳ ವಾಹನಗಳಲ್ಲಿ ಆಹಾರದ ಪೊಟ್ಟಣಗಳನ್ನು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next