Advertisement

 ಲಾಟಿ ಬಿಟ್ಟು ಹೂ ಹಿಡಿದ ಪೊಲೀಸರು

04:59 PM May 13, 2021 | Team Udayavani |

ಆನೇಕಲ್‌: ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂ ಸಿದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ ಪೊಲೀಸರ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದsರಿಂದ ತಮ್ಮ ನಿಲುವು ಬದಲಿಸಿಕೊಂಡ ಆನೇಕಲ್‌ ಉಪವಿಭಾಗದ ಅತ್ತಿಬೆಲೆ, ಆನೇಕಲ್‌, ಹೆಬ್ಬಗೋಡಿ, ಜಿಗಣಿ, ಪೊಲೀಸರು ಬೀದಿಗಿಳಿದ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದರು.

Advertisement

ಪೊಲೀಸರ ಈ ಕಾರ್ಯಕ್ಕೆ ರಸ್ತೆ ಸಂಚಾರಿಗಳು ಮಾರು ಹೋದರು. ಅದು ಅಲ್ಲದೆ, ನಡೆದು ಹೋಗುತ್ತಿದ್ದ ಕಟ್ಟಡ ಕಾರ್ಮಿಕರಿಗೆ, ವಾಹನ ಚಾಲಕ, ಕ್ಲೀನರ್‌ಗಳಿಗೆ ಮಾಸ್ಕ್, ಗುಲಾಬಿ ಹೂ ನೀಡಿ ಆರೋಗ್ಯದ ಕಡೆ ಗಮನ ಹರಿಸಿ ಎಂದು ತಿಳಿ ಹೇಳಿದರು. ಇನ್ನು ತಿರುಪಾಳ್ಯ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ, ಕುಡಿಯುವ ನೀರು, ಮಾಸ್ಕ್ ವಿತರಿಸಿ ದರು. ಈ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ಪಿ ಲಕ್ಷ್ಮೀ ಗಣೇಶ್‌, ಡಿವೈಎಸ್ಪಿ ಡಾ.ಎಚ್‌.ಎಂ. ಮಹದೇವಪ್ಪ ಮಾರ್ಗದರ್ಶನದಂತೆ ಹೆಬ್ಬಗೋಡಿ ವೃತ್ತ ನಿರೀಕ್ಷಕ ಗೌತಮ್‌, ಉಪನಿರೀಕ್ಷಕ ಪಿ. ರಾಕೇಶ್‌, ಸಿಬ್ಬಂದಿ ಗಂಗರಾಜು, ಎಎಸ್‌ಐ ರಾಜ ಶೇಖರ್‌, ಸಿಬ್ಬಂದಿ ನರಸಿಂಹರೆಡ್ಡಿ, ಕೋದಂಡರೆಡ್ಡಿ ಇನ್ನಿತರೆ ಗೃಹರಕ್ಷಕ ಸಿಬ್ಬಂದಿಯಿಂದ ಬೊಮ್ಮಸಂದ್ರ ಮೇಲ್ಸೇತುವೆ ಕೆಳಗಡೆ ಗುಲಾಬಿ ಹೂ ನೀಡಿ ಅಭಿಯಾನ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next