ಚನ್ನಪಟ್ಟಣ: ಗೆಲುವು ಪದಕವನ್ನು ತಂದು ಕೊಟ್ಟರೆ, ಸೋಲು ಎಂದೂ ಮರೆಯಲಾಗದಪಾಠವನ್ನು ಕಲಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್‌ಕುಮಾರ್ ಹೇಳಿದರು.
ಪಟ್ಟಣದ ಡಿಎಆರ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರೀಡೆಯಲ್ಲಿ ಗೆಲುವಿನ ಬೆನ್ನೇರಿ ಹೋಗುವುದುಪ್ರತಿಯೊಬ್ಬ ಕ್ರೀಡಾಪಟುವಿನ ಸಹಜ ಗುಣ,ಗೆದ್ದವರು ಬೀಗದೆ, ಸೋತವರು ಕುಗ್ಗದೆ ಸೋಲುಗೆಲುವನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ನಿಜವಾದ ಕ್ರೀಡಾಪಟುವಾಗಲು ಸಾಧ್ಯ ಎಂದರು.
ಪೊಲೀಸ್ ಸಿಬ್ಬಂದಿಗಳು ಇತರ ನೌಕರರಿಗಿಂತ ಹೆಚ್ಚಿನ ಸಮಯ ಕೆಲಸ ಮಾಡುವುದರಿಂದ ಸಹಜವಾಗಿ ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಸಿಲುಕುತ್ತಾರೆ. ಈ ಒತ್ತಡಗಳನಡುವೆಯೇ ಕೆಲಸ ನಿರ್ವಹಿಸಲೇಬೇಕಾದಅನಿವಾರ್ಯತೆ ಅವರದ್ದಾಗಿದ್ದು, ಕ್ರೀಡಾಕೂಟಗಳು ತಾತ್ಕಾಲಿಕವಾಗಿ ಅವರ ಒತ್ತಡ ಕಡಿಮೆಮಾಡಲು ಸಹಕಾರಿಯಾಗುತ್ತವೆ ಎಂದರು.
ಕರ್ತವ್ಯದ ಜತೆಗೆ ಪೊಲೀಸರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕಿದ್ದು, ನಿಯಮಿತ ವ್ಯಾಯಾಮ ಮತ್ತು ಸಮತೋಲನ ಆಹಾರ ಸೇವನೆ ಬಹುಮುಖ್ಯವಾಗಿದೆ, ಪೊಲೀಸರು ಆರೋಗ್ಯವಾಗಿದ್ದಲ್ಲಿ ಮಾತ್ರ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯ ಎಂದರು.
ದಿನದ 24 ತಾಸುಗಳು ಕೂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಪಾಲನೆಯಲ್ಲಿತೊಡಗುವ ಪೊಲೀಸರಿಗೆ, ಹಬ್ಬಹರಿದಿನಗಳಿರುವುದಿಲ್ಲ, ಕುಟುಂಬದವರ ಜತೆ ಬೆರೆಯುವಭಾಗ್ಯವು ಇರುವುದಿಲ್ಲ, ತಮ್ಮ ಕುಟುಂಬದ ರಕ್ಷಣೆಯನ್ನು ಮರೆತು, ಸಮಾಜದ ಆಸ್ತಿಪಾಸ್ತಿ ಪ್ರಾಣಗಳನ್ನು ಕಾಪಾಡುವ ಪೊಲೀಸರನ್ನು ಎಲ್ಲರೂ ಸ್ಮರಿಸಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಮಾತನಾಡಿ, ಪೊಲೀಸರಿಗಾಗಿಯೇಆಯೋಜನೆ ಮಾಡುವ ಇಂತಹ ಕ್ರೀಡಾಕೂಟ ಗಳ ಸದುಪಯೋಗವನ್ನು ಎಲ್ಲರೂ ಪಡೆದು ಕೊಳ್ಳಬೇ ಕು ಎಂದು ತಿಳಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪೊಲೀಸ್ ಉಪವಿ ಭಾಗಾಧಿಕಾರಿಗಳಾದ ಚನ್ನಪಟಣದ ಕೆ.ಎನ್. ರಮೇಶ್, ಮಾಗಡಿ ಓಂಪ್ರಕಾಶ್, ರಾಮನಗರದ ಮೋಹನ್‌ಕುಮಾರ್, ಜಿಲ್ಲಾ ಶಸ್ತ್ರಸ್ತ್ರ ಮೀಸಲು ಪಡೆಯ ಮಹೇಶ್ ಇತರರು ಉಪಸ್ಥಿತರಿದ್ದರು.