Advertisement

ಮಂಗಳೂರಿನಲ್ಲಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌

09:05 AM May 11, 2019 | Vishnu Das |

ಮಂಗಳೂರು: ನಗರದ ಜಪ್ಪಿನಮೊಗರು ಬಳಿ ಗುರುವಾರ ತಡರಾತ್ರಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್‌ ನಡೆಸಿದ್ದಾರೆ.

Advertisement

ನಟೋರಿಯಸ್‌ ರೌಡಿಶೀಟರ್‌ ಆಗಿರುವ ಗೌರೀಶ್‌ನನ್ನು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗೌರೀಶ್‌ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗುಂಡು ತಗುಲಿ ಕುಸಿದು ಬಿದ್ದ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗೌರೀಶ್‌ ವಿರುದ್ಧ 3 ಕೊಲೆ ಕೇಸ್‌ ಸೇರಿ ಹಲವು ಪ್ರಕರಣ ಗಳು ದಾಖಲಾಗಿವೆ. ಹಫ್ತಾ ವಸೂಲಿ, ಬೆದರಿಕೆ ಹಾಕಿದ ಪ್ರಕರಣಗಳೂ ದಾಖಲಾಗಿವೆ. ಭೂಗತ ಜಗತ್ತಿನೊಡನೆ ನಂಟು ಹೊಂದಿರುವುದು ಪೊಲೀಸರಿಗೆ ತಿಳಿದು ಬಂದಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next