Advertisement

ಪರಾರಿಯಾಗಲು ಯತ್ನ: ಮಂಗಳೂರಿನಲ್ಲಿ ಆರೋಪಿ ಕಾಲಿಗೆ ಗುಂಡು

05:10 PM Aug 22, 2022 | Team Udayavani |

ಮಂಗಳೂರು: ಸ್ಥಳ ಮಹಜರಿಗೆ ಹೋದ ವೇಳೆ ಸಿಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ ಘಟನೆ ಸೋಮವಾರ ನಡೆದಿದೆ.

Advertisement

ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಂಬಳ ಗ್ರಾಮದ ಬಳಿ ಸ್ಥಳ ಮಹಜರು ವೇಳೆ ಎಂ.ಡಿ. ಮುಷ್ತಾಕ್ (26) ಎಂಬ ಕೊಲೆ ಯತ್ನ ಪ್ರಕರಣದ ಆರೋಪಿ ಸಿಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.

ವಾಹನ ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲು ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಆ. 19 ರಂದು ನಡೆದ  ಕೊಲೆ ಯತ್ನ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next