ಲಕ್ನೋ: ಪ್ರಯಾಗ್ ರಾಜ್ ನ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಗ್ಯಾಂಗ್ ಸ್ಟರ್ -ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸದ್ ಮತ್ತು ಶೂಟರ್ ಗುಲಾಮ್ ಅವರನ್ನು ಗುರುವಾರ ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆಯು ಎನ್‌ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಡಿವೈಎಸ್ಪಿ ನಾವೆಂದು ಮತ್ತು ಡಿವೈಎಸ್ಪಿ ವಿಮಲ್ ನೇತೃತ್ವದ ಯುಪಿಎಸ್ಟಿಎಫ್ ತಂಡವು ಅಸದ್ ಮತ್ತು ಗುಲಾಮ್ ಎನ್ ಕೌಂಟರ್ ನಡೆಸಿದೆ.
ಮೂಲಗಳ ಪ್ರಕಾರ ಅತೀಕ್ ಪುತ್ರ ಅಸದ್ ಮದುವೆ ಆಯೇಷಾ ನೂರಿ ಮಗಳೊಂದಿಗೆ ನಿಶ್ಚಯವಾಗಿತ್ತು. ಕಳೆದ ವರ್ಷ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಉಮೇಶ್ ಪಾಲ್ ಶೂಟೌಟ್ ಪ್ರಕರಣದಲ್ಲಿ ಅತೀಕ್ ಪುತ್ರ ಅಸದ್ ಭಾಗಿಯಾಗಿದ್ದ. ಆತನ ತಲೆಗೆ ಐದು ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಲಾಗಿತ್ತು.
ಇದನ್ನೂ ಓದಿ:Kollur mookambika ದೇವಳದಲ್ಲಿ ರಿಷಬ್ – ಬೊಮ್ಮಾಯಿ ಮಾತುಕತೆ: ಮತ್ತೋರ್ವ ಸ್ಟಾರ್ ಪ್ರಚಾರಕ?
ಪೊಲೀಸರು ಈಗಾಗಲೇ ಅತೀಕ್ ಸಹೋದರಿ ಆಯೇಷಾ ನೂರಿ ಅವರ ಪತಿ ಡಾ.ಅಖ್ಲಾಕ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಉಮೇಶ್ ಪಾಲ್ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿರುವ ಶೂಟರ್ ಗುಡ್ಡು ಆಯೇಷಾ ನೂರಿ ಮನೆಗೆ ಹೋಗಿದ್ದ.
ಘಟನೆ ನಡೆದ ಸುಮಾರು 10 ದಿನಗಳ ನಂತರ ಶೂಟರ್ ಗುಡ್ಡು 17 ಗಂಟೆಗಳ ಕಾಲ ಆಯೇಷಾ ನೂರಿ ಮನೆಯಲ್ಲಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.