Advertisement

ವಾಹನ ಚಾಲಕರ ಹಸಿವು ನೀಗಿಸಿದ ಪೊಲೀಸರು

02:03 PM May 19, 2021 | Team Udayavani |

ಹುಬ್ಬಳ್ಳಿ: ಕೊರೊನಾ ಲೌಕ್‌ಡೌನ್‌ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಹಸಿದವರಿಗೆ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

Advertisement

ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-4ರ ಬೆಂಗಳೂರು ಮಾರ್ಗದಲ್ಲಿ ಕರ್ತವ್ಯದಲ್ಲಿರುವ ಗ್ರಾಮೀಣ ಪೊಲೀಸರು ಸಂಚರಿಸುವ ವಾಹನಗಳನ್ನು ನಿಲ್ಲಿಸಿ, ಅವಶ್ಯವುಳ್ಳ ಚಾಲಕರು ಮತ್ತು ಕ್ಲೀನರ್‌, ಹಮಾಲರಿಗೆ ಅನ್ನ ಮತ್ತು ಮೊಟ್ಟೆಯ ಪೊಟ್ಟಣಗಳನ್ನು ಕೊಟ್ಟು ಹಸಿವು ನೀಗಿಸುತ್ತಿದ್ದಾರೆ. ಹೆದ್ದಾರಿಗಳಲ್ಲಿ ಬಹುತೇಕ ಹೋಟೆಲ್‌, ಅಂಗಡಿಗಳು ಬಂದ್‌ ಇವೆ. ಇದರಿಂದ ಈ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರು ಹಸಿದುಕೊಂಡೇ ಸಂಚಾರ ಮಾಡಬೇಕಾಗಿದೆ. ಇದನ್ನು ಅರಿತ ಮಾಲತೇಶ ಬಾರ್ಕಿ ಅವರು ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್‌ ರಮೇಶ ಗೋಕಾಕ ಮಾರ್ಗದರ್ಶನದಲ್ಲಿ ಅಡುಗೆ ವ್ಯವಸ್ಥೆ ಮಾಡಿದ್ದರು.

ಎಎಸ್‌ಐ ಡಿ.ಎನ್‌. ನೀಲಮ್ಮನವರ, ಬಸವರಾಜ ಹುಬ್ಬಳ್ಳಿ, ಚಂದ್ರು, ದೀಪಕ, ಭರಮಣ್ಣ ಹರಿಜನ ಇವರೆಲ್ಲರ ಸಹಕಾರದಲ್ಲಿ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನಗಳ ಚಾಲಕರು, ಸಹಾಯಕರಿಗೆ ಊಟ ಕೊಟ್ಟು ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಇವರಿಗೆ ಎನ್‌ಎಚ್‌ಎಐ ಸಾದಿಕ್‌ ಮಿಶ್ರಿಕೋಟಿ ಹಾಗೂ ಸಿಬ್ಬಂದಿ ಕೈ ಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next