Advertisement

ಗೃಹಬಂಧನ ಧಿಕ್ಕರಿಸಿದ ಮೀರ್‌ವೇಜ್‌ ಪೊಲೀಸರ ವಶಕ್ಕೆ

04:27 PM Apr 04, 2018 | Team Udayavani |

ಶ್ರೀನಗರ : ತನ್ನ ಗೃಹ ಬಂಧನವನ್ನು ಧಿಕ್ಕರಿಸಿ ಶೋಪಿಯಾನ್‌ ಗೆ ಜಾಥಾ ನಡೆಸಲು ಮುಂದಾದ ಹುರಿಯತ್‌ ಕಾನ್ಫರೆನ್ಸ್‌ ಸೌಮ್ಯ ಬಣದ ಅಧ್ಯಕ್ಷ ಮೀರ್‌ವೇಜ್‌ ಉಮರ್‌ ಫಾರೂಕ್‌ ಅವರನ್ನು ಪೊಲೀಸರು ಇಂದು ತಮ್ಮ ವಶಕ್ಕೆ ತೆಗೆದುಕೊಂಡರು. 

Advertisement

ಕಳೆದ ಭಾನುವಾರ ಮೀರ್‌ವೇಜ್‌ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಆದರೆ ನಿರ್ಬಂಧಗಳನ್ನು ಧಿಕ್ಕರಿಸಿದ ಅವರು ಗೃಹ ಬಂಧನದಿಂದ ಹೊರಬಂದು ತನ್ನ ನಿವಾಸದ ಎದುರು ಜಮಾಯಿಸಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ ಬಳಿಕ ಶೋಪಿಯಾನ್‌ ಜಾಥಾಗೆ ಮುಂದಾದರು. ಒಡನೆಯೇ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು; ಬಳಿಕ ಅವರನ್ನು ನೈಗೀನ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಇದೇ ರೀತಿ ಪೊಲೀಸರು ಕಟ್ಟರ್‌ವಾದಿ ಹುರಿಯತ್‌ ಅಧ್ಯಕ್ಷ ಸೈಯದ್‌ ಅಲಿ ಶಾ ಗೀಲಾನಿ ಅವರು ತಮ್ಮ ಹೈದರ್‌ಪೋರಾ ನಿವಾಸದಿಂದ ಹೊರಗೆ ಬಾರದಂತೆ ನಿರ್ಬಂಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next