Advertisement
ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗೆ ಅನಗತ್ಯ ವಾಹನ ಹಾಗೂ ಸಾರ್ವಜನಿಕರ ಸಂಚಾರ ಓಡಾಟಕ್ಕೆ ನಿರ್ಬಂಧ, ರಾತ್ರಿ 10 ಗಂಟೆ ನಂತರ ಪಬ್,ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಚಟುವಟಿಕೆಮೇಲೆ ನಿಯಂತ್ರಣ ಇರಲಿದ್ದು ಪ್ರತಿ ಪೊಲೀಸ್ ಠಾಣೆವ್ಯಾಪ್ತಿಯಲ್ಲೂ ಇದನ್ನು ಪಾಲಿಸುವಂತೆ ಖುದ್ದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ.
Related Articles
Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ರಾಜ್ಯ ಸರ್ಕಾರ ಶನಿವಾರದಿಂದ 10 ದಿನಗಳಕಾಲ ಕೋವಿಡ್ ಕರ್ಫ್ಯೂ ಆದೇಶ ಹೊರಡಿಸಿದೆ. ಈಗಾಗಲೇ 144 ಸೆಕ್ಷನ್ ನಗರದಲ್ಲಿ ಜಾರಿಯಲ್ಲಿದೆ.ಇದರಂತೆ ರಾತ್ರಿ 10 ಗಂಟೆ ಮೇಲೆ ನಗರದ ರಸ್ತೆಗಳಲ್ಲಿಯಾರಾದರೂ ಸುಖಾಸುಮ್ಮನೆ ಓಡಾಡುವುದುಕಂಡು ಬಂದರೆ, ವಿಪತ್ತು ನಿರ್ವಹಣಾ ಕಾಯ್ದೆಯಡಿಬಂಧಿಸಲಾಗುವುದು ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿ ನಗರದಲ್ಲಿ ವಾಹನಗಳಲ್ಲಿ ಓಡಾಡುವುದು ಕಂಡು ಬಂದರೆ, ವಾಹನ ಜಪ್ತಿ ಮಾಡಲಾಗುವುದು. ವೈದ್ಯಕೀಯ ಹಾಗೂ ಅಗತ್ಯ ಸೇವೆಗಳಿಗೆವಾಹನಗಳ ಓಡಾಟಕ್ಕೆ ವಿನಾಯಿತಿ ನೀಡಲಾಗಿದೆ. ತಪಾಸಣೆ ವೇಳೆ ಸಂಬಂಧಪಟ್ಟ ದಾಖಲೆ ತೋರಿಸಬೇಕಿದೆ. ರಾತ್ರಿ ಪಾಳಿ ಕೆಲಸ ಮಾಡುವವವರು ರಾತ್ರಿ 10 ರೊಳಗೆ ಕೆಲಸ ಮಾಡುವ ಸ್ಥಳದಲ್ಲಿ ಇರಬೇಕು. ತಡವಾಗಿ ರಸ್ತೆಗಿಳಿದರೆ ಅವರಿಗೂ ಅವಕಾಶ ಇಲ್ಲ. ತುರ್ತು ಸೇವೆಗೆ ಓಡಾಟಕ್ಕೆ ಅವಕಾಶ ಇದೆ ಎಂದು ಹೇಳಿದರು.
ಹೋಂ ಡೆಲಿವರಿ, ಗೂಡ್ಸ್ ವಾಹನಗಳಿಗೆ ಅವಕಾಶ ಇದೆ. ರಾತ್ರಿ ಬೆಂಗಳೂರಿಗೆ ಬರುವ ಹಾಗೂ ಹೋಗುವವರು ರೈಲು, ಬಸ್, ವಿಮಾನದ ಟಿಕೆಟ್‌ಹಿಡಿದು ಸಂಚಾರ ಮಾಡಬಹುದು. ಆದರೆ, ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ರಾತ್ರಿ 10 ಗಂಟೆಅಂಗಡಿ ಮುಂಗಟ್ಟು ತೆರೆದಿದ್ದರೆ ಮಾಲೀಕರ ವಿರುದ್ಧ ಎನ್‌ಡಿಎಂಎ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಪ್ರಯಾಣಿಕರಿದ್ದಾಗ ಮಾತ್ರ ಓಲಾ, ಊಬರ್ ಓಡಾಟ ನಡೆಸಬಹುದು. ತುರ್ತು ಸಂದರ್ಭದಲ್ಲಿ ಓಡಾಡುವವರಿಗೆ ಯಾವುದೇ ಪಾಸ್ ನೀಡುವ ಪ್ರಶ್ನೆ ಉದ್ಭವಿಸಲ್ಲ. ಸಂಬಂಧಪಟ್ಟ ದಾಖಲಾತಿ ಅಥವಾ ಗುರುತಿನ ಚೀಟಿ ಹೊಂದಿರುವುದೇ ಪಾಸ್ ಆಗಿರಲಿದೆ. ಮಾಸ್ಕ್, ಫೇಸ್‌ಶೀಲ್ಡ್, ಸ್ಯಾನಿಟೈಜರ್‌ಜತೆಗೆ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಕರ್ಫ್ಯೂ ಹಿನ್ನೆಲೆ ನಾಳೆಯಿಂದ ಅಗತ್ಯ ಚೆಕ್ : ಪಾಯಿಂಟ್ ಮಾಡಿಕೊಳ್ಳುತ್ತೇವೆ. ಇವತ್ತು ಬ್ಯಾರಿಕೇಡ್, ಚೆಕ್‌ಪಾಯಿಂಟ್ ಹಾಕುವುದಿಲ್ಲ. ಈ ಬಗ್ಗೆ ಶನಿವಾರತಯಾರಿ ಮಾಡಿಕೊಳ್ಳು ತ್ತೇವೆ. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್‌ಗೆ ಉಸ್ತುವಾರಿ ವಹಿಸಲಾಗಿದೆ. – ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ
ನಗರಾದ್ಯಂತ 180 ಚೆಕ್ ಪಾಯಿಂಟ್ :
ಬೆಂಗಳೂರು: ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 8 ನಗರಗಳಲ್ಲಿ ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೆ ಮಾರ್ಗಸೂಚಿ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಶನಿವಾರ ರಾತ್ರಿಯಿಂದ 180 ಕಡೆ ಚೆಕ್ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗು ವುದು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪರಿಸ್ಥಿತಿ ನೋಡಿಕೊಂಡು ಕೆಲವು ರಸ್ತೆಗಳನ್ನು ಬಂದ್ (ಕ್ಲೋಸ್) ಮಾಡುವ ಬಗ್ಗೆ ತೀರ್ಮಾನ ತೆಗದು ಕೊಳ್ಳಲಾಗುವುದು. ರಾತ್ರಿ 9.50ಕ್ಕೆನಗರದ ಎಲ್ಲಾ ಫ್ಲೈಓವರ್‌ಗಳು ಸಂಪೂರ್ಣ ಬಂದ್ ಆಗಲಿವೆ. ನಗರದ ಎಲ್ಲಾ ಡಬ್ಬಲ್ ರೋಡ್‌ಗಳು ಸಿಂಗಲ್ ರೋಡ್‌ಗಳಾಗಿ ಬದಲಾವಣೆಯಾಗಲಿವೆ ಎಂದು ಹೇಳಿದರು.
ಕೋವಿಡ್ ಸೋಂಕು ನಿಯಂತ್ರಣ ದೃಷ್ಟಿಯಿಂದ ನಗರಾದ್ಯಂತ 180 ಕಡೆ ಚೆಕ್ ಪಾಯಿಂಟ್ ಗಳನ್ನು ನಿರ್ಮಾಣ ಮಾಡಲಾಗುವುದು. ಕೊರೊನಾ ಕರ್ಫ್ಯೂ ಮಾರ್ಗಸೂಚಿ(ರೂಲ್ಸ್) ಉಲ್ಲಂಘನೆ ಮಾಡಿದರೆ, ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಕೈಗಾರಿಕೆಗಳಿಗೆ ತೊಂದರೆಯಾಗಬಾರದು :
ಬೆಂಗಳೂರು: ಕೋವಿಡ್ ವ್ಯಾಪಕವಾಗಿ ಹರಡದಂತೆ ತಡೆಯಲು ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಏ.20ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವಸರ್ಕಾರ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕೆಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮನವಿ ಮಾಡಿದೆ. ರಾತ್ರಿ ಹೊತ್ತಿನಲ್ಲಿ ಕಾರ್ಯ ನಿರ್ವಹಿಸುವ ಕೈಗಾರಿಕೆಗಳ ಕಾರ್ಮಿಕರು ಗುರುತಿನ ಚೀಟಿ ಪ್ರದರ್ಶಿಸಿ ಓಡಾಡಲು ಅವಕಾಶ ನೀಡಬೇಕು. ಕಚ್ಚಾ ಸಾಮಗ್ರಿ ಪೂರೈಕೆ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು. ಒಟ್ಟಾರೆ ರಾತ್ರಿ ಪಾಳಿಯಲ್ಲೂ ಕಾರ್ಯ ನಿರ್ವಹಿಸುವ ಕೈಗಾರಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಮನವಿ ಮಾಡಿದ್ದಾರೆ.ಕಳೆದ ವರ್ಷ ಜಾರಿಯಾಗಿದ್ದ ಲಾಕ್‌ಡೌನ್‌ನ ಹೊಡೆತದಿಂದ ದೇಶದ ಆರ್ಥಿಕತೆ, ಕೈಗಾರಿಕೆಗಳು ಇನ್ನಷ್ಟೇ ಚೇತರಿಸಿಕೊಳ್ಳುತ್ತಿವೆ. ಈ ಹೊತ್ತಿನಲ್ಲಿ ಮತ್ತೆ ಕೈಗಾರಿಕಾ ಚಟುವಟಿಕೆಗಳ ಮೇಲೆ ಅತಿಯಾದ ನಿಯಂತ್ರಣ ಹೇರಿದರೆ ಉದ್ದಿಮೆದಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಹೇಳಿದ್ದಾರೆ.