Advertisement
ಉಡುಪಿ: 500 ಗೃಹರಕ್ಷಕ ಸಿಬಂದಿಉಡುಪಿ ಜಿಲ್ಲೆಯಲ್ಲಿ 500 ಮಂದಿ ಗೃಹರಕ್ಷಕರಿದ್ದು, ಅವರಲ್ಲಿ 132 ಜನ ಕರಾವಳಿ ಪೊಲೀಸ್ ಪಡೆ, 106 ಆರಕ್ಷಕರ ಠಾಣೆ, ಪ್ರವಾಸಿ ಮಿತ್ರದಲ್ಲಿ 10, ಗಣಿ ಇಲಾಖೆ 5, ಅಗ್ನಿಶಾಮಕ ದಳ 19, ನೆರೆ ನಿರ್ವಹಣೆ 10, ಜೈಲು ಕರ್ತವ್ಯ 10 ಜನರು ಗೃಹ ರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಪೊಲೀಸ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುವವರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿಲ್ಲ.
ದ.ಕ. ಜಿಲ್ಲೆಯಲ್ಲಿ ಒಟ್ಟು 1,000 ಮಂದಿ ಗೃಹರಕ್ಷಕರಿದ್ದಾರೆ, ಅವರಲ್ಲಿ 400 ಜನರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 600 ಮಂದಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಾತೆಗೆ ನೇರ ಸಂದಾಯ
ಪೊಲೀಸ್ ಸಿಬಂದಿ ಕೊರತೆಯ ಕಾರಣದಿಂದಾಗಿ ಗೃಹ ಇಲಾಖೆ ಕೆಲವು ವರ್ಷಗಳ ಹಿಂದೆ ಗೃಹ ರಕ್ಷಕ ದಳದ ಸಿಬಂದಿಯನ್ನೇ ಗೌರವಧನದ ಆಧಾರದ ಮೇಲೆ ಸೇವೆಗೆ ನಿಯೋಜಿಸಿಕೊಂಡಿತ್ತು. ಆರಂಭದಲ್ಲಿ ಪೊಲೀಸ್ ಇಲಾಖೆ ಗೃಹ ರಕ್ಷಕರ ಸಂಬಳವನ್ನು ಇಲಾಖೆ ಮೂಲಕ ಪಾವತಿ ಮಾಡುತ್ತಿತ್ತು. ಆದರೆ ಕೆಲವು ಸಮಯದ ಹಿಂದೆ ಪೊಲೀಸ್ ಇಲಾಖೆ ಸಿಬಂದಿಯ ಬ್ಯಾಂಕ್ ಖಾತೆಗೆ ಗೌರವಧನವನ್ನು ನೇರವಾಗಿ ಸಂದಾಯ ಮಾಡಲಾಗುತ್ತಿತ್ತು. ಇದೀಗ ಸಿಬಂದಿಗಳ ಸಂಬಳ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎನ್ನುವ ಆರೋಪಗಳಿವೆ.
Related Articles
ಪೊಲೀಸ್ ಕಾರ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕ ದಳ ಸಿಬಂದಿಗಳಿಗೆ ಸದ್ಯ ಸಂಬಳವಿಲ್ಲದೆ ಜೀವನ ನಿರ್ವಹಣೆಗಾಗಿ ಸಾಲದ ಮೊರೆಹೋಗಿ, ಸಂಕಷ್ಟಕ್ಕೆ ಸಿಲುಕಿದ್ದಾರೆ.ಭದ್ರತೆಗಾಗಿ ಪರದಾಡುವ ಸ್ಥಿತಿ ಪೊಲೀಸ್ ಇಲಾಖೆ ವತಿಯಿಂದ ಪ್ರತಿದಿನಕ್ಕೆ 380 ರಂತೆ ಗೌರವಧನ ನೀಡಲಾಗುತ್ತದೆ. ತಿಂಗಳಪೂರ್ತಿ ಕೆಲಸ ಮಾಡಿದರೆ 9 ಸಾವಿರ ಸಂಬಳ ಸಿಗುತ್ತದೆ. ಅನಾರೋಗ್ಯ, ಇನ್ನಾವುದೋ ಕಾರಣಕ್ಕೆ ರಜೆ ಹಾಕಿದರೆ ಅದರಲ್ಲಿ ಕೂಡ ಕಡಿತವಾಗುತ್ತದೆ. ಗೃಹರಕ್ಷಕರು ಇವತ್ತು ಜೀವನ ಭದ್ರತೆಗಾಗಿ ಪರದಾಡುವ ಸ್ಥಿತಿ ಬಂದಿದೆ ಎಂದು ಗೃಹ ರಕ್ಷಕದಳದ ಸಿಬಂದಿಯೊಬ್ಬರು ಬೇಸರ ವ್ಯಕ್ತಪಡಿದರು.
Advertisement
ರಾಜ್ಯದ ಸಮಸ್ಯೆಪೊಲೀಸ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುವವರಿಗೆ ಇಲಾಖೆಯೇ ವೇತನ ನೀಡಬೇಕು. ಪ್ರಸ್ತುತ ಸರಕಾರದಿಂದ ಪೊಲೀಸ್ ಇಲಾಖೆಗೆ ಅನುದಾನ ಬಂದಿಲ್ಲ. ಇದರಿಂದಾಗಿ ಗೃಹರಕ್ಷಕ ಸಿಬಂದಿಗಳಿಗೆ ಕಾರಣ ವೇತನ ಪಾವತಿಯಾಗುತ್ತಿಲ್ಲ. ಇದು ರಾಜ್ಯದ ಸಮಸ್ಯೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಗೃಹ ರಕ್ಷಕ ಸಿಬಂದಿಗಳ ವೇತನ ಪಾವತಿಯಾಗಿದೆ. ಯಾವುದೇ ಸಮಸ್ಯೆಯಿಲ್ಲ.
-ಡಾ| ಮುರಲೀ ಮೋಹನ್ ಚೂಂತಾರು, ಸಮಾದೇಷ್ಟರು, ದ.ಕ. ಜಿಲ್ಲಾ ಗೃಹರಕ್ಷಕದಳ ವೇತನ ಬರುತ್ತಿದೆ. ಕೆಲವು ಸಂದರ್ಭ ತಾಂತ್ರಿಕ ಕಾರಣಗಳಿಂದ ವೇತನ ಬಟವಾಡೆಯಲ್ಲಿ ತಡವಾಗಿರಬಹುದು.
– ಡಾ|ಪ್ರಶಾಂತ ಶೆಟ್ಟಿ, ಸಮಾದೇಷ್ಟರು, ಉಡುಪಿ ಜಿಲ್ಲಾ ಗೃಹರಕ್ಷಕದಳ. -ತೃಪ್ತಿ ಕುಮ್ರಗೋಡು